Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ರಬ್ಬರ್ ತೋಟದಲ್ಲಿ ಚಿರತೆ ಓಡಾಟ; ಮಹಿಳೆಯಿಂದ ಚಿರತೆಯ ಫೋಟೋ & ವಿಡಿಯೋ ಚಿತ್ರೀಕರಣ

ಬೆಳ್ತಂಗಡಿ : ರಬ್ಬರ್ ತೋಟದಲ್ಲಿ ಚಿರತೆ ಓಡಾಟ; ಮಹಿಳೆಯಿಂದ ಚಿರತೆಯ ಫೋಟೋ & ವಿಡಿಯೋ ಚಿತ್ರೀಕರಣ

0
8

ಬೆಳ್ತಂಗಡಿ : ನೆರಿಯ ಗ್ರಾಮದ ಅಲವೂರು ಎಂಬಲ್ಲಿ ಬಾಬಿ ಎಂಬವರ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಬೆಳಗ್ಗಿನ ಜಾವ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕಾರ್ಮಿಕರಿಗೆ ಚಿರತೆಯೊಂದು ಕಾಣಲು ಸಿಕ್ಕಿದ್ದು ಜನರಲ್ಲಿ ಭಯ ಮೂಡಿಸಿದೆ.

ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿರಲಿಲ್ಲ. ಇದೀಗ
ಎ.5 ರಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡಲು ತೆರಳಿದ್ದ ನಾಗಮ್ಮ ಎಂಬ ಮಹಿಳೆಗೆ ಚಿರತೆಯನ್ನು ನೋಡಿದ್ದು ಇದರ ವಿಡಿಯೋ ಮತ್ತು ಫೋಟೋವನ್ನು ತಮ್ಮ ಮೊಬೈಲ್ ನಲ್ಲಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.ತೋಟದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

NO COMMENTS

LEAVE A REPLY

Please enter your comment!
Please enter your name here