Home ರಾಜಕೀಯ ಸಮಾಚಾರ ತಾಲೂಕಿನ ವಿವಿಧ ಅಭಿವೃದ್ದಿ ಕಾರ್ಯಗಳಿಗೆ  ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಶಿಲ ಸೇತುವೆಗೆ  ಹೆಚ್ಚುವರಿ ಅನುದಾನಕ್ಕೆ...

ತಾಲೂಕಿನ ವಿವಿಧ ಅಭಿವೃದ್ದಿ ಕಾರ್ಯಗಳಿಗೆ  ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಶಿಲ ಸೇತುವೆಗೆ  ಹೆಚ್ಚುವರಿ ಅನುದಾನಕ್ಕೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

30
0

ಬೆಳ್ತಂಗಡಿ. ತಾಲೂಕಿನ ನಾರಾವಿ-ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.80 ರಿಂದ 9.10ರವರೆಗೆ ಅಭಿವೃದ್ಧಿ,ಬದ್ಯಾರು ಸವಣಾಲು ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 3.00 ರಿಂದ 6.80ರವರೆಗೆ ಅಭಿವೃದ್ಧಿ.
ದಿಡುಪೆ-ಸಂಸೆ ರಸ್ತೆ ಕಿ.ಮೀ 0.00 ರಿಂದ 9. 00 ರವರೆಗೆ ರಸ್ತೆ ಕಾಂಕ್ರಿಟೀಕರಣ ಅಭಿವೃದ್ಧಿ.
ಚಾರ್ಮಾಡಿ ಗ್ರಾಮದ ಕುಂಡೊಟ್ಟು ಎಂಬಲ್ಲಿ ಕಾಲುಸಂಕ ರಚನೆ ತೋಟತ್ತಾಡಿ ಗ್ರಾಮದ ದಡ್ಡು ಎಂಬಲ್ಲಿ ಸೇತುವೆ ರಚನೆ ಕಾಮಗಾರಿ,ಬೆಳ್ತಂಗಡಿ ನಗರದಲ್ಲಿ ಲೋ.ಇ ಸಿಬ್ಬಂದಿಗಳ ವಸತಿಗೃಹ ನಿರ್ಮಾಣಕ್ಕೆ. ಅನುದಾನ ಒದಗಿಸುವಂತೆ ಮತ್ತು ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಸನ್ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿ ಮೇರೆಗೆ 275.00ಲಕ್ಷಗಳ ಅನುದಾನ(ಲೆ.ಶೀ.5054-03-101-0-02-132 ಪ್ರಮೂಖ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ) ಬಿಡುಗಡೆಗೆ ಆದೇಶವಾಗಿದ್ದು . ಅದರೆ ಸದ್ರಿ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು ಮೊತ್ತದಂತೆ ಈ ಕಾಮಗಾರಿಗೆ 499.36 ಲಕ್ಷಗಳ ಅನುದಾನ ಬೇಕಾಗಿದ್ದು. ಹಾಗಾಗಿ ಈ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ,’ ಮತ್ತು ಅತಿ ಅವಶ್ಯವಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿಯನ್ನು ನೀಡಿದರು. ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದರು.

LEAVE A REPLY

Please enter your comment!
Please enter your name here