Home ಅಪರಾಧ ಲೋಕ ಉಜಿರೆಯ ಬ್ರಹ್ಮ ಕಲಶೋತ್ಸವಕ್ಕೆ ಹೋದ ಅಪ್ರಾಪ್ತ ಬಾಲಕನ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲು

ಉಜಿರೆಯ ಬ್ರಹ್ಮ ಕಲಶೋತ್ಸವಕ್ಕೆ ಹೋದ ಅಪ್ರಾಪ್ತ ಬಾಲಕನ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲು

0
2

ಬೆಳ್ತಂಗಡಿ : ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ 17 ವಯಸ್ಸಿನ ಮುಸ್ಲಿಂ ಧರ್ಮದ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರ ತಂಡವೊಂದು ಅಮಾನುಷವಾಗಿ ಹಲ್ಲೆ ನಡೆಸಿ ಅಪಹರಿಸಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ ಮಾ.11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾನೆ ರಾತ್ರಿ 8.30 ರ ಸುಮಾರಿಗೆ ಜಾತ್ರೆಯಲ್ಲಿ ಆತನ ಸ್ನೇಹಿತರು ಜಾಯೆಂಟ್ ವೀಲ್ ಮೇಲೆ ಹತ್ತಿದ ಸಂದರ್ಭದಲ್ಲಿ ಅವರ ಮೊಬೈಲ್ ಹಿಡಿದುಕೊಂಡು ಸಮೀಪದಲ್ಲಿ ನಿಂತಿದ್ದ ಬಾಲಕನನ್ನು ಉಜಿರೆಯ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಗೌರವ್ ಶೆಟ್ಟಿ ಹಾಗೂ ರಮೇಶ್ ಇತರರೊಂದಿಗೆ ಸೇರಿ ನೀನು ಮುಸ್ಲಿಮನಾ ಎಂದು ಪ್ರಶ್ನಿಸಿದ್ದಾರೆ ಹೌದು ಎಂದಾಗ ಆತನ ಮೇಲೆ ಇವರು ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈವೇಳೆ ಆತನ ಸ್ನೇಹಿತರು ಬಿಡಿಸಲು ಬಂದರೂ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಜಾತ್ರೆಯ ನಡುವೆ ಜನಸಂದಣಿ ಹೆಚ್ಚಾದಾಗ ಬಾಲಕನ್ನು ಅಲ್ಲಿಂದ ಬೈಕ್ ನಲ್ಲಿ ತಂಡ ಅಪಹರಿಸಿದ್ದು ಸುಮಾರು ಐದು ಕಿ.ಮೀ ದೂರದವರೆಗೆ ಕೊಂಡೊಯ್ದು ಅಲ್ಲಿ ನಿರ್ಜನ ಪ್ರದೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿಯ ತಂಡ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ.

ನೀವು ಬ್ಯಾರಿಗಳು ಟೆರರಿಸ್ಟ್ ಗಳು ನಿಮ್ಮನ್ನು ಕೊಂದರೆ ಒಬ್ಬ ಟೆರರಿಸ್ಟ್ ಅನ್ನು ಕೊಂದ ಹಾಗೆ ಎಂದು ಬೆದರಿಸಿದ್ದಾರೆ. ಅಲ್ಲದೆ ಬೆದರಿಕೆಯೊಡ್ಡಿ ಆತನ ವಿಡಿಯೋವನ್ನು ಮಾಡಿಕೊಂಡಿದ್ದಾರೆ ನಿರಂತರ ಹಲ್ಲೆ ನಡೆಸಿದ ಬಳಿಕ ತಡ ರಾತ್ರಿವೇಳೆ ಬಾಲಕನನ್ನು ಉಜಿರೆಯ ಬೆಳಾಲು ಕ್ರಾಸ್ ನ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿದ್ದಾರೆ. ಇದನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಹಲ್ಲೆಗೆ ಒಳಗಾದ ಬಾಲಕ ಮನೆಗೆ ಬಂದ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದ ನಡೆದ ಘಟನೆಯನ್ನು ಮನೆಯವರ ಬಳಿ ಹೇಳಿರಲಿಲ್ಲ ಪ್ರತಿದಿನ ಆರೋಪಿಗಳು ಬಾಲಕನಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಾಲಕ ಮೊಬೈಲ್ ಕರೆಯನ್ನು ಸ್ವೀಕರಿಸದೆ ಇದ್ದಾಗ ಆತನ ಮೊಬೈಲಿಗೆ ಗೌರವ್ ಶೆಟ್ಟಿ ಸಂದೇಶ ಕಳುಹಿಸಿ ನೀನು ಕರೆ ಸ್ವೀಕರಿಸದಿದ್ದರೆ ನಿನ್ನ ಮನೆಗೆ ಬರುತ್ತೇವೆ ಎಂದು ಬೆದರಿಕೆ ಹಾಕಿದ್ದ ಇದಾದ ಬಳಿಕ ಖಿನ್ನತೆಗೆ ಒಳಗಾದ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಮೂರು ಪುಟಗಳ ಡೆತ್ ನೋಟ್ ಬರೆದಿದ್ದಾನೆ. ಈ ಡೆತ್ ನೋಟ್ ಮನೆಯವರ ಗಮನಕ್ಕೆ ಆಕಸ್ಮಿಕವಾಗಿ ಬಂದಿದ್ದು ಬಾಲಕನಲ್ಲಿ ವಿಚಾರಿಸಿದಾಗ ಎಲ್ಲ ಮಾಹಿತಿಗಳನ್ನು ಹೇಳಿದ್ದಾನೆ. ಈ ಹಿನ್ನಲೆಯಲ್ಲಿ ಬಾಲಕನ ತಂದೆ ಮಾ 18ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಹಲ್ಲೆ, ಕೊಲೆ ಬೆದರಿಕೆ, ಗುಂಪು ಹಲ್ಲೆ, ಜೀವಬೆದರಿಕೆ, ಅಪಹರಣ, ಆತ್ಮಹತ್ಯೆಗೆ ಪ್ರೇರಣೆಯ ಬಗ್ಗೆ ನೀಡಿರುವ ದೂರಿನಂತೆ ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರ ವಿರುದ್ಧ ಪೊಲೀಸರು BNS 137(2),115(2),351(2),352,353(2) ಜೊತೆಗೆ 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ

NO COMMENTS

LEAVE A REPLY

Please enter your comment!
Please enter your name here