
ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಡಂತ್ಯಾರು ಸಮೀಪ ಡಿ.14 ರಂದು ನಡೆದಿದೆ.
ಮೃತ ವ್ಯಕ್ತಿ ನೋಯೆಲ್ ಜೋಸೆಫ್ ಪಿಂಟೋ (38) ಎಂಬವರಾಗಿದ್ದಾರೆ. ಇವರು ಮೆಸ್ಕಾಂ ವೇಣೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ತಮ್ಮ ಮನೆಯಲ್ಲಿ ಕೆಲಸದವರಿಗೆ ತಿಂಡಿ ತರಲೆಂದು ಬೆಳಗ್ಗೆ ಮಡಂತ್ಯಾರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಕೆ.ಎಸ್.ಆರ್.ಟಿ. ಸಿ ಬಸ್, ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡುವ ವೇಳೆಗೆ ಬೈಕ್ ಗೆ ಡಿಕ್ಕಿ ಹೊಡೆದಿದೆ ಅಪಘಾತದಲ್ಲಿ ನೋಯೆಲ್ ಗಂಭೀರವಾಗಿ ಗಾಯಗೊಂಡಿದ್ದು ಅವರು ಮೃತಪಟ್ಟಿದ್ದಾರೆ.








