ಬೆಳ್ತಂಗಡಿ; ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ, ಜಿಲ್ಲೆಯ ಹಲವು ಮಸ್ಜಿದ್ ಗಳಲ್ಲಿ ಧರ್ಮಗುರುಗಳಾಗಿದ್ದ
ಹಸನ್ ಮುಸ್ಲಿಯಾರ್(78) ಪುತ್ರಬೈಲು ಅವರು ಅಲ್ಪಕಾಲದ ಅಸೌಖ್ಯದಿಂದ ನ.28 ರಂದು ಬೆಳಗ್ಗಿನಜಾವಾ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಧರ್ಮಗುರುಗಳಾಗಿ ಅವರು
ಕೊಕ್ಕಡ, ಉಪ್ಪಿನಂಗಡಿ, ನೆಲ್ಯಾಡಿ, ಬೆಳ್ತಂಗಡಿ, ಪುತ್ರಬೈಲು, ಮಂಗಳೂರಿನ ಪಡೀಲ್, ಬಂದರ್ ಕೇಂದ್ರ ಮಸ್ಜಿದ್ ಇಲ್ಲೆಲ್ಲಾ ಸೇವೆ ಸಲ್ಲಿಸಿದ್ದರು.
ಮೃತರ ಅಂತಿಮ ವಿಧಿಗಳನ್ನು ಸುನ್ನತ್‌ಕೆರೆಯಲ್ಲಿ ನಡೆಸಿ ಮಯ್ಯತ್ ನಮಾಝ್ ಗೆ ಪುತ್ರಬೈಲು ಮಸ್ಜಿದ್ ಗೆ ತರಲಾಯಿತು. ಬಳಿಕ ಗುರುವಾಯನಕೆರೆ ಮಸ್ಜಿದ್ ದಫನ ಭೂಮಿಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು
ಪತ್ನಿ ಅತಿಜಮ್ಮ ಝೊಹರಾ, ಮಕ್ಕಳಾದ ಮುಹಮ್ಮದ್ ಶಾಕಿರ್, ಫಾರೂಕ್, ಶರೀಫ್, ಝೊಹರಾ, ಸಕೀನಾ, ಖೈರುನ್ನಿಸಾ, ಮಂಮ್ತಾಝ್, ಹಸೀನಾ, ಶಂಶು, ಹಪ್ಸಾ ಮತ್ತು ಝೈನಬಾ, ಹಾಗೂ ಸಹೋದರರು, ಅಪಾರ ಸಂಖ್ಯೆಯಲ್ಲಿ ಶಿಷ್ಯಂದಿರು ಮತ್ತು ಬಂಧುವರ್ಗದವರನ್ನು ಅಗಲಿದ್ದಾರೆ.
