Home ಸ್ಥಳೀಯ ಸಮಾಚಾರ ಮುಂಡಾಜರ ಸಿ.ಎ ಬ್ಯಾಂಕಿನ ಪಿಗ್ಮಿ ಸಂಗ್ರಾಹಕ ಜಯಂತ ರಾವ್ ನಿಧನ

ಮುಂಡಾಜರ ಸಿ.ಎ ಬ್ಯಾಂಕಿನ ಪಿಗ್ಮಿ ಸಂಗ್ರಾಹಕ ಜಯಂತ ರಾವ್ ನಿಧನ

0

ಬೆಳ್ತಂಗಡಿ; ಮುಂಡಾಜೆ ಸಿ.ಎ ಬ್ಯಾಂಕಿನ ಪಿಗ್ಮಿ‌ಸಂಗ್ರಾಹಕರಾಗಿದ್ದ ಕಲ್ಮಂಜ ಗ್ರಾಮದ ಕೊತ್ತಳಿಗೆ ನಿವಾಸಿ ಜಯಂತ ರಾವ್ (61) ಗುರುವಾರ ತಮ್ಮ ಮನೆಯ ಸಮೀಪ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ರಬ್ಬರ್ ಹಾಲು ತೆಗೆದು ತಂದು ಶೀಟ್ ಮಾಡುವ ಕಾರ್ಯ ಮಾಡುತ್ತಿದ್ದ ವೇಳೆ ಇವರು ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಅವರು ಮೃತ ಪಟ್ಟಿದ್ದರು.
ಪ್ರಗತಿಪರ ಕೃಷಿಕರಾಗಿದ್ದ ಜಯಂತ್ ರಾವ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಕಳೆದ ಹಲವು ವರ್ಷಗಳಿಂದ ಮುಂಡಾಜೆ ಸಿ.ಎ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದರು.
ಮೃತರು ಪತ್ನಿ ಹಾಗೂ ಪುತ್ರ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version