

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಬಾಬು ಗೌಡ @ಬಾಲು ಗೌಡ ಅನಾರೋಗ್ಯದಿಂದ ನ.23ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಧರ್ಮಸ್ಥಳ ಮಣ್ಣಸಂಕದಲ್ಲಿ ಕೊಲೆಯಾದ ಸೌಜನ್ಯಳ ಅಜ್ಜನಾಗಿರುವ ಬಾಬು ಗೌಡ ಅವರು ಸೌಜನ್ಯಳಿಗೆ ನ್ಯಾಯಕೊಡಿಸಲು ನಡೆದ ಹೋರಾಟಗಳ ಮುಂಚೂಣಿಯಲ್ಲಿದ್ದರು.
ಮೃತರು ಪತ್ನಿ ಶಾರದಾ, ನಾಲ್ವರು ಹೆಣ್ಣು ಮಕ್ಕಳಾದ
ಕುಸುಮಾವತಿ, ಯಶೋಧ, ಪ್ರೇಮಾ, ಪುಷ್ಪ, ಈರ್ವರು ಗಂಡು ಮಕ್ಕಳಾದ ವಿಠಲ ಮತ್ತು ಪುರಂದರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.









