
ಗುರುವಾಯನಕೆರೆ: ಇಲ್ಲಿನ ವಿದ್ವತ್ ಎಜುಕೇಶನ್ ಫೌಂಡೇಶನ್ ವತಿಯಿಂದ ಉಬಾರ್ ಚೆಸ್ ಅಕಾಡೆಮಿ ಮತ್ತು DKCA (ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್) ಸಹಯೋಗದಲ್ಲಿ ಅಂತರ್ ಜಿಲ್ಲಾ ಶಾಲಾ ಮಟ್ಟದ ರ್ಯಾಪಿಡ್ (RAPID) ಚೆಸ್ ಪಂದ್ಯಾವಳಿಯು ವಿದ್ವತ್ ಚೆಸ್ ಟ್ರೋಫಿ – 2026 ಇದೇ ನವೆಂಬರ್ 27ರಂದು ಗುರುವಾಯನಕೆರೆಯ ವಿದ್ವತ್ ಪಿ.ಯು. ಕಾಲೇಜಿನಲ್ಲಿ ನಡೆಯಲಿದೆ.
ಉಬಾರ್ ಚೆಸ್ ಅಕಾಡೆಮಿಯ ನಿರ್ದೇಶಕ ಜಗನ್ನಾಥ್ ಅಡಪ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಕಾಲೇಜಿನ ಆವರಣದಲ್ಲಿ ನ.27 ರಂದು ಬೆಳಗ್ಗೆ 9.30ಕ್ಕೆ ಜರುಗಲಿದೆ.
ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ 8, 10, 12, 14, 16 ಹಾಗೂ 18 ವರ್ಷ ವಯೋಮಾನದೊಳಗಿನ ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಉಬಾರ್ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿಯೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಒಟ್ಟು 264 ಟ್ರೋಫಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಅಂತರ್ ಜಿಲ್ಲಾ ಸ್ಪರ್ಧಿಗಳಿಗೆ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರತ್ಯೇಕವಾಗಿ 7 ಟ್ರೋಫಿಗಳನ್ನು ನೀಡಲಾಗುವುದು. ಉಬಾರ್ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಿಗೂ 15 ವಿಶೇಷ ಟ್ರೋಫಿಗಳನ್ನು ನೀಡಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಮಧ್ಯಾಹ್ನದ ಊಟ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರವೇಶ ಶುಲ್ಕ ರೂ.550 ಆಗಿದ್ದು, ನೋಂದಣಿಗೆ ನವೆಂಬರ್ 25 ಕೊನೆಯ ದಿನವಾಗಿದೆ. ಆಸಕ್ತ ವಿದ್ಯಾರ್ಥಿಗಳು www.chessfee.com ಮೂಲಕ ನೋಂದಣಿ ಮಾಡಿಕೊಳ್ಳಬಹುದು. (ಉಬಾರ್ ಚೆಸ್ ವಿದ್ಯಾರ್ಥಿಗಳು ಆಫ್ ಲೈನ್ ಮೂಲಕವೇ 9620469172 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ನೋಂದಾಯಿಸಬೇಕಾಗಿದೆ). ಹೆಚ್ಚಿನ ಮಾಹಿತಿಗಾಗಿ 9008857064 ಹಾಗೂ 9731771990 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.