Home ರಾಜಕೀಯ ಸಮಾಚಾರ ಅಂಗಡಿಗೆ ಆಕಸ್ಮಿಕ ಬೆಂಕಿಯಿಂದ ನಷ್ಟ; ಶರೀಫ್ ಬೆಂದ್ರಾಳ ಅವರಿಗೆ ಶಾಸಕರು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ...

ಅಂಗಡಿಗೆ ಆಕಸ್ಮಿಕ ಬೆಂಕಿಯಿಂದ ನಷ್ಟ; ಶರೀಫ್ ಬೆಂದ್ರಾಳ ಅವರಿಗೆ ಶಾಸಕರು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ನೆರವು

0

ಬೆಳ್ತಂಗಡಿ; ಬೆಂಕಿ ಆಕಸ್ಮಿಕದಿಂದ ಅಂಗಡಿ ಉರಿದು ಭಾರೀ ನಷ್ಟ ಉಂಟಾಗಿದ್ದ ತೋಟತ್ತಾಡಿ ಸನಿಹದ ಬೆಂದ್ರಾಳ ನಿವಾಸಿ ಶರೀಫ್ ಅವರಿಗೆ ಶಾಸಕ‌ ಹರೀಶ್ ಪೂಂಜ ಆರ್ಥಿಕ ನೆರವು ನೀಡಿ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ವತಿಯಿಂದಲೂ ಆರ್ಥಿಕ ಸಹಕಾರ ಒದಗಿಸಕೊಡಲಾಗಿದೆ.
ಬಿಜೆಪಿ‌ ಶಕ್ತಿ‌‌ ಕೇಂದ್ರದ ಪ್ರಮುಖರಾದ ಓಬಯ್ಯ ಗೌಡ, ಚಾರ್ಮಾಡಿ‌ ಗ್ರಾ.ಪಂ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಮಾಜಿ ಸದಸ್ಯರಾದ ಫ್ರಾನ್ಸಿಸ್ ವಿ.ಡಿ, ಅಲ್ಪಸಂಖ್ಯಾತ ಮೋರ್ಚಾದ ತಾಲೂಕು ಅಧ್ಯಕ್ಷ ಪಿ.ಸಿ‌ ಸೆಬಾಸ್ಟಿಯನ್, ತಾಲೂಕು ಸಮಿತಿ ಸದಸ್ಯ ಪ್ರಿನ್ಸ್ ಥೋಮಸ್, ಪ್ರಮುಖರಾದ ಗೋಪಾಲಕೃಷ್ಣ ಮಡೀರ್, ಪಿ.ಜೆ ಆಂಟನಿ, ಬೂತ್ ಸಮಿತಿ ಅಧ್ಯಕ್ಷ ದಿವಾಕರ ಗೌಡ ಬಾರೆ, ಥೋಮಸ್ ಕಾಂಜಾಲ್, ಅಬ್ದುಲ್‌ಖಾದರ್ ಬೆಂದ್ರಾಳ ಮೊದಲಾದವರು‌ ಉಪಸ್ಥಿತರಿದ್ದರು.
ಶಾಸಕರ ಪರವಾಗಿ ನಿಯೋಗ ಶರೀಫ್ ಅವರ ಅಂಗಡಿಗೇ ತೆರಳಿ ಸಾಂತ್ವಾನ ಮೊತ್ತವನ್ನು ಹಸ್ತಾಂತರಿಸಿ ಧೈರ್ಯ ತುಂಬಿದರು. ಅಗ್ನಿ ಅವಘಡದಿಂದ ಬದುಕಿನ ದಾರಿ ದೀಪವಾಗಿದ್ದ ಅಂಗಡಿಯಲ್ಲಿ ಭಾರೀ ನಷ್ಟವಾಗಿದ್ದು, ಶರೀಫ್ ಅವರು ಮತ್ತೆ ಅದನ್ನು ಮರುಸ್ಥಾಪಿಸಿದ್ದಾರೆ. ತಾನು ಕಷ್ಟದಲ್ಲಿರುವಾಗ ಕೈ ಹಿಡಿದ ಶಾಸಕರು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾಗೆ ಶರೀಫ್ ಅವರು ಕೃತಜಞತೆ ಸಲ್ಲಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version