Home ಅಪರಾಧ ಲೋಕ ಬೆಳ್ತಂಗಡಿ : ಮೇಲಂತಬೆಟ್ಟು ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಯತ್ನ

ಬೆಳ್ತಂಗಡಿ : ಮೇಲಂತಬೆಟ್ಟು ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಯತ್ನ

12
0

ಬೆಳ್ತಂಗಡಿ : ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಿಂಬಾಗಿಲು ಮುರಿದು ಮನೆಯೊಳಗೆ ಹುಡುಕಾಟ ನಡೆಸಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬೆಳ್ತಂಗಡಿಯ ಮೇಲಂತಬೆಟ್ಟಿ‌ನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಅತ್ತೋಡಿಗುತ್ತು ರಸ್ತೆಯ ಬ್ಲಿಸ್ ನಿವಾಸಿ ಫಿಲೋಮಿನಾ ರೋಡ್ರಿಗಸ್ (61) ಎಂಬವರ ಮನೆಗೆ ನ.18 ರ ರಾತ್ರಿ -ನ.19 ರ ಸಂಜೆ 4 ಗಂಟೆ ಸಮಯದ ನಡುವೆ ಯಾರೋ ಅಪರಿಚಿತ ಕಳ್ಳರು ಕಬ್ಬಿಣದ ಸಲಕೆ ಬಳಸಿ ಹಿಂಬಾಗಿಲು ಮುರಿದು ಒಳನುಗ್ಗಿ ಮನೆಯೊಳಗಿನ ಕಪಾಟುಗಳನ್ನು ಹುಡುಕಾಟ ನಡೆಸಿ ಯಾವುದೇ ಬೆಲೆಬಾಳುವ ಚಿನ್ನಾಭರಣಗಳು ಸಿಗದ ಕಾರಣ ಬಾರಿ ಕೈಯಲ್ಲಿ ವಾಸಪ್ ಹೋಗಿದ್ದಾರೆ.

ಫಿಲೋಮಿನಾ ರೋಡ್ರಿಗಸ್ ಅನಾರೋಗ್ಯ ಕಾರಣದಿಂದ ಮೆಡಿಕಲ್ ಟೆಸ್ಟ್ ಮಾಡಿಸಲು ಮನೆಗೆ ಬೀಗ ಹಾಕಿ ಮಂಗಳೂರು ಸಂಬಂಧಿ ಮನೆಗೆ ಹೋಗಿ ಕಳೆದ ಒಂದು ವಾರಗಳಿಂದ ಉಳಿದುಕೊಂಡಿದ್ದರು, ಮಗ ಜಾನ್ಸನ್ ಮತ್ತು ಸೊಸೆ ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು. ಕಳೆದ ಒಂದು ವಾರಗಳಿಂದ ಮನೆಯಲ್ಲಿ ಯಾರು ಇರಲಿಲ್ಲ. ಮಗ ಜಾನ್ಸನ್ ನ.19 ರಂದು ಸಂಜೆ 4:30 ರ ಸುಮಾರಿಗೆ ರೋಷನ್ ಕಾರ್ಡ್ ಮನೆಯಿಂದ ತೆಗೆದುಕೊಂಡು ಹೋಗಲು ಮನೆಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ಫಿಲೋಮಿನಾ ರೋಡ್ರಿಗಸ್ ಸಹೋದರ ಅಲ್ಫೋನ್ಸ್ ರೋಡ್ರಿಗಸ್ ಅವರ ಪಕ್ಕದ ಮನೆಯ ಹಿಂಭಾಗದಲ್ಲಿ ಇಟ್ಟಿದ್ದ ಎರಡು ಕಬ್ಬಿಣದ ಸಲಕೆಯನ್ನು ತಂದು ಈ ಕೃತ್ಯ ನಡೆಸಲಾಗಿದೆ, ಬಳಿಕ ತೋಟದಲ್ಲಿ ಕಬ್ಬಿಣದ ಸಲಕ್ಕೆಯನ್ನು ಬಿಸಾಕಿ ಪರಾರಿಯಾಗಿದ್ದಾರೆ.ಸುಮಾರು 12 ಗ್ರಾಂ ಚಿನ್ನಾಭರಣವನ್ನು ಫಿಲೋಮಿನಾ ರೋಡ್ರಿಗಸ್ ಅವರು ಮನೆಯಲ್ಲಿ ಬಟ್ಟೆಯೊಳಗಡೆ ಅಡಗಿಸಿಟ್ಟ ಕಾರಣ ಕಳ್ಳರ ಕೈಗೆ ಸಿಗದೆ ಭದ್ರವಾಗಿ ಉಳಿದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಲೋಕೇಶ್ ಮತ್ತು ಸತೀಶ್ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನ.19 ರಂದು ಜಾನ್ಸನ್ ಅವರು ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here