Home ರಾಜಕೀಯ ಸಮಾಚಾರ ಶಾಲೆಯಲ್ಲಿ ದ್ವೇಷ ಭಾಷಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಖಂಡನೆ

ಶಾಲೆಯಲ್ಲಿ ದ್ವೇಷ ಭಾಷಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಖಂಡನೆ

0

ಬೆಳ್ತಂಗಡಿ;  ಕೆಪಿಎಸ್ ಪುಂಜಾಲಕಟ್ಟೆ ಶಾಲೆಯ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್ ಪೂಂಜಾರವರು ದರಿದ್ರ ಕಾಂಗೇಸ್ ಪಕ್ಷವನ್ನು ಎಂದಿಗೂ ಬೆಬಲಿಸಬೇಡಿ ಎಂದು ಮಕ್ಕಳಿಗೆ ಕರೆ ಕೊಟ್ಟಿರುವುದನ್ನು ಕಟುವಾಗಿ ಟೀಕಿಸಿರುವ ಬ್ಲಾಕ್ ಕಾಂಗ್ರೇಸ್ (ಗ್ರಾಮೀಣ) ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ದರಿದ್ರ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ಕೊಳಕು ಮನಸ್ಥಿತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವೆಂದು ಪ್ರಶ್ನಿಸಿದ್ದಾರೆ.

ಶಾಸಕ ಪೂಂಜಾರು ತನ್ನ ಕೊಳಕು ರಾಜಕೀಯಕ್ಕಾಗಿ ಅಪ್ರಾಪ್ತ ಮಕ್ಕಳ ತಲೆಗೆ ವಿಷವಿಕ್ಕುವ ಕೆಲಸ ಮಾಡಿದ್ದು , ಇದರಿಂದ ಮಕ್ಕಳ ಸವಿಂಧಾನೀಕ ಹಕ್ಕುಗಳಿಗೆ ಧಕ್ಕೆಯಾಗಿದ್ದು , ಅವರ ಮೇಲೆ ಮಕ್ಕಳ ಹಕ್ಕುಗಳ ಕಲ್ಯಾಣ ಆಯೋಗ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿರುವ ಅವರು ಶಿಕ್ಷಣ ಇಲಾಖೆ ಕೂಡ ಪೋಲಿಸ್ ಇಲಾಖೆಗೆ ದೂರು ನೀಡಿ ಪ್ರಕರಣ ದಾಖಲಿಸಬೇಕು‌. ಇದು ಶೈಕ್ಷಣಿಕ ಕ್ಷೇತವನ್ನು ರಾಜಕೀಯಗೊಳಿಸುವವರಿಗೆ ಪಾಠವಾಗಬೇಕು ಎಂದು ನಾಗೇಶ್ ಕುಮಾರ್ ಗೌಡ ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version