Home ರಾಜಕೀಯ ಸಮಾಚಾರ ವಿಧಾನ ಪರಿಷತ್ ಚುನಾವಣೆ 4 ಕ್ಷೇತ್ರಗಳಲ್ಲಿ NDA ಗೆಲುವು; ಕಾಂಗ್ರೆಸ್ ಗೆ ತೀವ್ರ ಹಿನ್ನಡೆ

ವಿಧಾನ ಪರಿಷತ್ ಚುನಾವಣೆ 4 ಕ್ಷೇತ್ರಗಳಲ್ಲಿ NDA ಗೆಲುವು; ಕಾಂಗ್ರೆಸ್ ಗೆ ತೀವ್ರ ಹಿನ್ನಡೆ

0

ಬೆಂಗಳೂರು: ವಿಧಾನ ಪರಿಷತ್ ಚುನಾಣೆಯ 4 ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ 4 ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದ್ದು ಎನ್.ಡಿ.ಎ ಮೈತ್ರಿಕೂಟಕ್ಕೆ ಹೊಸ ವಿಶ್ವಾಸ ನೀಡಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಎ. ಪಿ. ರಂಗನಾಥ್ ಜೆಡಿಎಸ್ (NDA)
ಪಶ್ಚಿಮ ಪದವೀಧರ ಕ್ಷೇತ್ರ ಎಸ್. ವಿ. ಸಂಕನೂರ ಬಿಜೆಪಿ (NDA)
ಆಗ್ನೇಯ ಪದವೀಧರ ಕ್ಷೇತ್ರ ಕೆ. ಎಂ. ಸುರೇಶ್ ಬಿಜೆಪಿ (NDA)
ಈಶಾನ್ಯ ಶಿಕ್ಷಕರ ಕ್ಷೇತ್ರ ಶಶೀಲ್ ಜಿ. ನಮೋಶಿ ಬಿಜೆಪಿ (NDA) ಭಾರೀ ಅಂತರದಲ್ಲಿಯೇ‌ ಗೆಲುವನ್ನು ಪಡೆದಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಸೇರಿದಂತೆ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಲ್ಲಿ ಗೆಲುವು ಎನ್.ಡಿ. ಎ ಮೈತ್ರಿಕೂಟದಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಚುನಾವಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್ ಅವರಿಗೆ ಹಾಗೂ ಕಾಂಗ್ರೆಸ್ ವಪಕ್ಷಕ್ಕೆ ಈ ಸೋಲು ಅರಗಿಸಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಯೂಚಿ ಎಂಬ ವ್ಯಾಖ್ಯಾನ ಈಗ ಎನ್.ಡಿ.ಎ ವಲಯದಲ್ಲಿ ಪ್ರಾರಂಭವಾಗಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ’ದ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಈ ಬಾರಿ ಎಚ್ಚರಿಕೆಯಿಂದ ಚುನಾವಣೆ ಎದುರಿಸಿದ್ದು ಆಡಳಿತ ಪಕ್ಷಕ್ಕೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಜಯ ನಿಶ್ಚಯ ಎಂದು ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ಸಂದರ್ಭದಲ್ಲಯೇ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗುತ್ತು. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ.ಸಂಕನೂರು ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶಿಲ್ ನಮೋಶಿ ನಿರೀಕ್ಷೆಯಂತೆಯೇ ಗೆಲುವನ್ನು ಪಡೆದರು.

ಬೆಂಗಳೂರು ಶಿಕ್ಷಕ ಹಾಗೂ ಆಗ್ನೇಯ ಪದವಿಧರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ನಿರೀಕ್ಷೆಗೆ ಮೀರಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಜ್ಷವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಈ ಗೆಲುವು ಮೈತ್ರಿಕೂಟದಲ್ಲಿ ಹೊಸ ಸಂಚಲನ ಮೂಡಿಸಿದ್ದು ಮೈತ್ರಿ ಹೊಂದಾಣಿಕೆಯಿಂದ ನಡೆದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ನ್ನು ಹಿಮ್ಮೆಟ್ಟಿಸಬಹುದೆಂಬ ವಿಶ್ವಾಸ ಮೈತ್ರಿಪಕ್ಷಗಳಲ್ಲಿ ಮೂಡಿಸಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆದಿಕಾರದಿಂದ ಕೆಳಗಿಳಿಸಿ ಮುಖ್ಯಮಂತ್ರ ಪಟ್ಟವನ್ನೇರಿದ ಡಿ‌‌.ಕೆ ಶಿವಕುಮಾರ್ ಅವರಿಗೆ ಮೊದಲ ಚುನಾವಣೆಯಲ್ಲಿ ಯೇ ಸೋಲನ್ನು ಕಾಣಬೇಕಾಗಿ ಬಂದಿರುವುದು ಶುಭ ಲಕ್ಷಣವಲ್ಲ. ಇನ್ನೆರಡು ತಿಂಗಳಿನಲ್ಲಿಯೇ ಜಿಲ್ಲಾ ಪಂಚಾಯತು ತಾಲೂಕು ಪಂಚಾಯತು ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿರಯವುದು ಸಾಂಪ್ರದಾಯಿಕ ವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಮತದಾರರ ಮೇಲೆ ಯಾವುದಾದರೂ ರೀತಿಯ
ಪರಿಣಾಮ ಬೀರಿದೆಯೇ ಎಂಬುದಕ್ಕೂ ಸ್ಪಷ್ಟವಾದ ಉತ್ತರ ತಾಲೂಕು ಪಂಚಾಯತು ಜಿಲ್ಲಾಪಂಚಾಯತು ಚುನಾವಣೆಯಲ್ಲಿ ಲಭಿಸುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ವಿಧಾನ ಪರಿಷತ್ ಚುನಾವಣೆಯ ಸೋಲು ಮೈತ್ರಿ ಕೂಟದಲ್ಲಿ ಹೊಸ ಉತ್ಸಾಹ ಮೂಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚಿಂತಿಗೆ ಕಾರಣವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version