Home ಸ್ಥಳೀಯ ಸಮಾಚಾರ ಮಂಗಳೂರು ಎಸ್.ಡಿ.ಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್ ಜೆ ಕಡಂಬ ನಿಧನ

ಮಂಗಳೂರು ಎಸ್.ಡಿ.ಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎನ್ ಜೆ ಕಡಂಬ ನಿಧನ

0

ಬೆಳ್ತಂಗಡಿ!: ವೇಣೂರು ಕುಕ್ಕೇಡಿ ಗುತ್ತು ಮನೆತನದ, ಬೆಳ್ತಂಗಡಿಯ ಹಿರಿಯ ವಕೀಲ ಎನ್.ಜೆ.ಕಡಂಬ (91ವ)ವಯೋಸಹಜ ಅಸೌಖ್ಯದಿಂದ ಮಂಗಳೂರಿನ ತಮ್ಮ ಪುತ್ರಿಯ ಮನೆಯಲ್ಲಿ ಅ.19ರಂದು ನಿಧನ ಹೊಂದಿದರು.

ಅವರು ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಸುಮಾರು 22 ವರ್ಷಗಳ ಕಾಲ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕರ್ನಾಟಕದ ಒಬ್ಬ ಪ್ರಖ್ಯಾತ ವಕೀಲರು, ಶಿಕ್ಷಣ ತಜ್ಞರು ಮತ್ತು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು.

1974ರಲ್ಲಿ ಎಸ್‌ಡಿಎಂ ಕಾನೂನು ಕಾಲೇಜು ಪ್ರಾರಂಭವಾದಾಗ ಅದರ ಜವಾಬ್ದಾರಿಯನ್ನು ವಹಿಸಿಕೊಂಡ ಇವರು, ಗುಣಮಟ್ಟದ ಕಾನೂನು ಶಿಕ್ಷಣಕ್ಕೆ ಬಲವಾದ ತಳಹದಿ ಹಾಕಿದ್ದರು. ಇವರು ಬೆಳ್ತಂಗಡಿಯಲ್ಲಿ ನ್ಯಾಯವಾದಿಯಾಗಿ, ಸೇವೆ ಸಲ್ಲಿಸಿದ್ದಾರೆ. ಬೆಳ್ತಂಗಡಿ ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದು, 1971 ರಿಂದ 1973ರ ಅವಧಿಯಲ್ಲಿ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಅಲ್ಲದೆ ಅನೇಕ ಸಂಘ ಸಂಸ್ಥೆ ಸಹಕಾರ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಸೇವೆಯನ್ನು ನೀಡಿದ್ದರು.ಅವರಿಗೆ ಪುತ್ರ ಹಾಗೂ ಐವರು ಪುತ್ರಿಯರಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version