ಬೆಳ್ತಂಗಡಿ:ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋದಲ್ಲಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗುಳಿತಡ್ಕ ನಿವಾಸಿ ಪ್ರಶಾಂತ ಗೌಡ (35) ಅಲ್ಪಕಾಲದ ಅಸೌಖ್ಯದಿಂದ ಅ.19ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಅವಿವಾಹಿತ ಅವರಿಗೆ ತಾಯಿ ಸಹೋದರ ಹಾಗೂ ಸಹೋದರಿ ಇದ್ದಾರೆ.
ಇವರ ಸಹೋದರ ಜಯಾನಂದ ಗೌಡ ಸೆ.3ರಂದು ಕಕ್ಕಿಂಜೆ ಸಮೀಪ ಅವರು ಚಲಾಯಿಸುತ್ತಿದ್ದ ಬೈಕಿಗೆ ಲಾರಿ ಡಿಕ್ಕಿಯಾಗಿ ನಿಧನ ಹೊಂದಿದ್ದರು.
