ಬೆಳ್ತಂಗಡಿ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ನಿರಂತರ 25 ವರ್ಷಗಳ ಉತ್ತಮ ಆಡಳಿತ ಮತ್ತು ಸೇವೆ ಇದರ ಸೇವಾ ಸಂಕಲ್ಪ ಅಭಿಯಾನ ಸಲುವಾಗಿ ಸೇನಾನಿಗಳಾದ ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ಸ್ವಚ್ಛತಾ ಕಾರ್ಯ ಅಕ್ಟೋಬರ್ 11 ರಂದು ನಡೆಯಿತು.ಈ ಕಾರ್ಯಕ್ರಮದ ಪ್ರಭಾರಿ ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಗುರುವಾಯನಕೆರೆ ಇವರ ನೇತೃತ್ವ ದಲ್ಲಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ರತ್ನಾಕರ್ ಬುಣ್ಣನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಆಚಾರ್ಯ ಕುವೆಟ್ಟು , ಸುಧೀರ್ ಬಂಡಾರಿ ಕರಿಮಣೇಲು, ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮನ್ ಕೀ ಬಾತ್ ಸಂಯೋಜಕರಾದ ಸೀತಾರಾಮ್ ಬೆಳಾಲು, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾದ ಸಿ.ಕೆ ಚಂದ್ರಕಲಾ, ಕುವೆಟ್ಟು ಶಕ್ತಿ ಕೇಂದ್ರ ಅಧ್ಯಕ್ಷರಾದ ಗಣೇಶ ಕುಲಾಲ್ ಕುವೆಟ್ಟು, ಪ್ರಮುಖರಾದ ಪದ್ಮ ಕುಲಾಲ್ ನಗರ, ವಸಂತ ಶೆಟ್ಟಿ, ಶ್ರೀನಾಥ್, ವಿತೇಶ್, ನಿಮಿತ್, ದಾಮೋದರ್, ವಸಂತ, ಕಿರಣ್,ಪ್ರಮೀಳಾ.ಎಸ್, ಅನಿತಾ.ಕೆ ಕುಕ್ಕೆಡಿ, ಸುಮಿತ್ರ ವಾಮನ, ಸೂರ್ಯ ಪ್ರಸಾದ್, ರಾಜೇಶ್ ಸುದೇಕ್ಕಾರ್, ರಮೇಶ್ ಬರಾಯ, ಸನತ್, ರಮೇಶ್, ಸೃಜನ್, ಮನೀಶ್, ವಿಕಾಸ್, ಅರ್ಪಿತಾ, ರವೀಂದ್ರ, ಪ್ರಶಾಂತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿತು.
