ಬೆಳ್ತಂಗಡಿ : ದಿಡುಪೆ ಫಾಲ್ಸ್ ಸುತ್ತಮುತ್ತಲಿನ ಪರಿಸರದಲ್ಲಿ ಕಾಡಾನೆಗಳ ಸಂಚಾರ ಮಾಡುತ್ತಿವೆ. ಪ್ರವಾಸಿಗರು ಈ ಪರಿಸರದಲ್ಲಿ ಓಡಾಟ ನಡೆಸುವಾಗ ಅಪಾಯ ಎದುರಾಗುವ ಸಾಧ್ಯತೆಗಳಿವೆ.
ಈ ಹಿನ್ನಲೆಯಲ್ಲಿ ಅ.10 ರಿಂದ(ನಾಳೆಯಿಂದ) ದಿಡುಪೆ ಫಾಲ್ಸ್ ಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಮಾಡಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಈ ಬಗ್ಗೆ ವನ್ಯ ಜೀವಿ ವಿಭಾಗ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
