Home ಸ್ಥಳೀಯ ಸಮಾಚಾರ ನಿವೃತ್ತಿ ಸೌಲಭ್ಯಗಳನ್ನು ನೀಡಲು ಅನಗತ್ಯ ವಿಳಂಬ  ಸುಲ್ಕೇರಿ ಮೊಗ್ರು ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ...

ನಿವೃತ್ತಿ ಸೌಲಭ್ಯಗಳನ್ನು ನೀಡಲು ಅನಗತ್ಯ ವಿಳಂಬ  ಸುಲ್ಕೇರಿ ಮೊಗ್ರು ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ನಿವೃತ್ತ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ಧರಣಿ

0

ಬೆಳ್ತಂಗಡಿ; ಸುಲ್ಕೇರಿ ಮೊಗ್ರು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ತನಗೆ ಬರಬೇಕಾಗಿರುವ ನಿವೃತ್ತ ಸೌಲಭ್ಯಗಳ ಪಾವತಿಗೆ ಸಂಸ್ಥೆಯ ಆಡಳಿತ ಮಂಡಳಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಂಸ್ಥೆಯ ಮುಖ್ಯ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
ಸೆ.10 ಗುರುವಾರ ಬೆಳಗ್ಗೆ ಇವರು ಕಚೇರಿ‌ ಮುಂದೆ ಧರಣಿ ಆರಂಭಿಸಿದ್ದಾರೆ.
ಆಡಳಿತ ಮಂಡಳಿಯಿಂದ‌ ಅನ್ಯಾಯಕ್ಕೆ ಒಳಗಾದ ಇನ್ನೋರ್ವ ಸಿಬ್ಬಂದಿ ಪ್ರಭಾಕರ ಅವರೂ ಧರಣಿ ಕುಳಿತಿದ್ದಾರೆ.

ಐದು ವರ್ಷಗಳ ಕಾಲ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ನಿವೃತ್ತರಾಗಿದ್ದು ನಿವೃತ್ತಿಯ ಬಳಿಕ ಇವರಿಗೆ ನಿವೃತ್ತಿ ಸೌಲಭ್ಯಗಳನ್ನು ನೀಡಲು ಉದ್ದೇಶಪೂರ್ವಕವಾಗಿ ಆಡಳಿತ ಮಂಡಳಿ ಅಡ್ಡಿ ಪಡಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಎಷ್ಟೆಲ್ಲ ಪ್ರಯತ್ನ ಗಳು ನಡೆಸಿದರೂ ಸಂಘ ನಿವೃತ್ತಿ ಸೌಲಭ್ಯಗಳನ್ನು ನೀಡಲು ನಿರಾಕತಿಸುತ್ತಿರುವ ಹಿನ್ನಲೆಯಲ್ಲಿ ಧರಣಿ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version