ಬೆಳ್ತಂಗಡಿ; ತಾಲೂಕಿನ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ನಾವೂರು ಹಾಗೂ ಕುತ್ಲೂರು ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು ಕೇಂದ್ರ ವನ್ಯಜೀವಿ ಮಂಡಳಿಯ ಅನುಮೋದನೆ ಲಭಿಸಿದ್ದು ಇದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಸ್ಥಳೀಯರು ನಿರಂತರವಾಗಿ ನಡೆಸಿದ ಪ್ರಯತ್ನದ ಫಲವಾಗಿ ಸಾಧ್ಯವಾಗಿದೆ ಇದೀಗ ಶಾಸಕ ಹರೀಶ್ ಪೂಂಜ ಅವರು ಪ್ರಚಾರ ಪಡೆಯಲು ಇದನ್ನು ತಾನೇ ಮಾಡಿಸಿದ್ದು ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಇದು ಶಾಸಕರಿಗೆ ಶೋಭೆ ತರುವ ವಿಚಾರವಲ್ಲ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ ಲಾಯಿಲ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2024 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಸಭೆಯ ಬಳಿಕ 2025 ರಲ್ಲು ಆನ್ ಲೈನ್ ಅರ್ಜಿ ಸಲ್ಲಿಕೆಯಾಗಿದೆ ಇದರ ಮುಂದುವರಿದ ಭಾಗವಾಗಿ ಈ ಅರ್ಜಿಯಲ್ಲಿ ಅನುಮೋದನೆ ಲಭಿಸಲು ರಕ್ಷಿತ್ ಶಿವರಾಂ ಅವರು ನಿರಂತರ ಪ್ರಯತ್ನ ನಡೆಸಿದ್ದಾರೆ.ಇದರ ಫಲವಾಗಿ ಇದೀಗ ವನ್ಯಜೀವಿ ಮಂಡಳಿಯ ಅನುಮೋದನೆ ಲಭಿಸಿದೆ. ಇದೀಗ ಕಾಮಗಾರಿಗೆ ಅನುದಾನ ಒದಗಿಸುವಂತೆ ಇಂಧನ ಸಚಿವರಾದ ಕೆಮಜೆ ಜಾರ್ಜ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ ಅವರು ಅನುದಾನ ಮೀಸಲಿಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಮುಖ್ಯ ಮಂತ್ರಿಯವರ ಸಭೆಯ ಬಳಿಕ ಸುಲ್ಕೇರಿ ಮೊಗ್ರು ಗ್ರಾಮದ ಮಾಳಿಗೆ ಪ್ರದೇಶದ ಜನರಿಗೆ ವಿದ್ಯುತ್ ಸಂಪರ್ಕಕ್ಕೆ ಅಂತಿಮ ಅನುಮೋದನೆ ಲಭಿಸಿದ್ದು ಇವರಿಗೆ ವಿದ್ಯುತ್ ಸಂಪರ್ಕ ಲಭಿಸಿದೆ ಎಂದು ತಿಳಿಸಿದರು.
ಶಾಸಕ ಹರೀಶ್ ಪೂಂಜ ಅವರು ಇದೀಗ ಇದೆಲ್ಲವನ್ನೂ ತಾನೇ ಮಾಡಿದ್ದು ಎಂದು ಹೇಳುತ್ತಿದ್ದಾರೆ ಅವರ ಪಕ್ಷದವರು ಶಾಸಕರಿಂದಲೇ ಎಲ್ಲ ಸಾಧ್ಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಶಾಸಕರಿಗೆ ಈ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಒದಗಿಸಬೇಕು ಎಂಬ ಆಸಕ್ತಿಯಿದ್ದರೆ 2019 ರಿಂದ 2023 ರ ವರೆಗೆ ಅವರು ಶಾಸಕರಾಗಿದ್ದಾಗ ರಾಜ್ಯದಲ್ಲಿ ಅವರದ್ದೇ ಸರಕಾರವಿತ್ತು ಕೇಂದ್ರದಲ್ಲಿಯೂ ಬಿಜೆಒಇ ಸರಕಾರವಿತ್ತು ಗ್ರಾ.ಪಂ ನಿಂದ ಆರಂಭಿಸಿ ಎಲ್ಲ ಜನಪ್ರತಿನಿಧಿಗಳು ಬಿಜೆಪಿಯವರೇ ಆಗಿದ್ದರು ಈ ಸಮಯದಲ್ಲಿ ವಿದ್ಯುತ್ ಒದಗಿಸಬಹುದಾಗಿತ್ತಲ್ಲ ಎಂದು ಪ್ರಶ್ನಿಸಿದ ಅವರು ವಿದ್ಯುತ್ ನೀಡುವುದಿರಲಿ ಒಂದು ಅರ್ಜಿ ಸಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ ಅಂದರೆ ಈ ವಿಚಾರದ ಬಗ್ಗೆ ಅವರ ಬದ್ದತೆ ಎಷ್ಟಿತ್ತು ಎಂದು ತಿಳಿಯಬಹುದಾಗಿದೆ. ಇದೀಗ ಅನುಮೋದನೆ ದೊರೆತ ಕೂಡಲೇ ತಾನೇ ಮಾಡಿಸಿದ್ದು ಎಂದು ಹೇಳುವ ಶಾಸಕರು ಆಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಹಾಗೂ ಜಯರಾಮ ಆದಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗದುಕೊಂಡ ಸರಕಾರಕ್ಕೆ ಹಾಗೂ ಅದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಲೆಕುಡಿಯ ಸಮುದಾಯದ ಮುಖಂಡರುಗಳಾದ ಪೂವಪ್ಪ ಮಲೆಕುಡಿಯ ಕುತ್ಲೂರು , ಸುಧಾಕರ ಮಲೆಕುಡಿಯ ಕುತ್ಲೂರು , ಜಯಂತ ಮಲೆಕುಡಿಯ ನಾವೂರು , ನವೀನ್ ಮಲೆಕುಡಿಯ ನಾವೂರು , ಪುಷ್ಪ ಕಾಟಾಜೆ ನೆರಿಯ , ಸುಕುಮಾರ್ ದಿಡುಪೆ ಅವಿನಾಶ್ ನಾವೂರು
ಸದಾಶಿವ ಎರ್ಮೆಲೆ , ಅಶೋಕ್ ಎರ್ಮೆಲೆ , ಚೀಂಕ್ರ ಮಲೆಕುಡಿಯ ಕುತ್ಲೂರು ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
