Home ಶಾಲಾ ಕಾಲೇಜು ಪ್ರಧ್ಯಾಪಕ ಮಹಮ್ಮದ್ ಇಕ್ಬಾಲ್ ಅವರಿಗೆ ಡಾಕ್ಟರೇಟ್

ಪ್ರಧ್ಯಾಪಕ ಮಹಮ್ಮದ್ ಇಕ್ಬಾಲ್ ಅವರಿಗೆ ಡಾಕ್ಟರೇಟ್

0

ಬೆಳ್ತಂಗಡಿ; ಉಜಿರೆ ಗ್ರಾಮದ ಮಾಚಾರು ನಿವಾಸಿ, ಪ್ರಸ್ತುತ ಡಾ. ಪಿ. ದಯಾನಂದ ಪೈ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ಇಕ್ಬಾಲ್ ಇವರಿಗೆ
ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾಲಯ ಸೇಲಂ ಇಲ್ಲಿಂದ ಡಾಕ್ಟರೇಟ್ ಪದವಿ ಲಭಿಸಿದೆ.

ಮಾಚಾರು ಬಂಡಸಾಲೆ ನಿವಾಸಿ ದಿ. ಅಬ್ದುಲ್ ರಝಾಕ್ ಮತ್ತು ನಫೀಸ ದಂಪತಿಯ ಪುತ್ರರಾಗಿರುವ ಅವರು ಡಾ. ಜೆ ವೆಂಕಟಾಚಲಂ
ಅವರ ಮಾರ್ಗದರ್ಶನದಲ್ಲಿ
“ಎಫೆಕ್ಟ್ ಆಫ್ ಜೆಪಿಎಂ‌ಆರ್ ಇಂಟರ್ವೆನ್ಷನ್ ಇನ್ ರೆಡ್ಯೂಸಿಂಗ್ ದ ಟೆಸ್ಟ್ ಆಂಗ್ಸೈಟಿ ಅಮಂಗ್ ಕಾಲೇಜ್ ಸ್ಟೂಡೆಂಟ್ಸ್”
ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಉಜಿರೆ ಎಸ್ ಡಿ ಎಮ್ ಉಜಿರೆ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ಮಹಮ್ಮದ್ ಇಕ್ಬಾಲ್ ಅವರು ಈ‌ ಹಿಂದೆಯೇ
ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ
ದಿಂದ ಎಂಫಿಲ್ ಪದವಿಪಡೆದಿದ್ದರು.
ಮುಂಡಾಜೆ ಪ.ಪೂ. ಕಾಲೇಜಿನಲ್ಲಿ
ಮನೋವಿಜ್ಞಾನ ಉಪನ್ಯಾಸಕರಾಗಿ, ಗೇರುಕಟ್ಟೆ ಮನ್ಶರ್ ಅಕಾಡಮಿಯ ಪ್ರಾಂಶುಪಾಲರಾಗಿ,
ಕುಂದಾಪುರದ ಭಂಡಾರ್ಕರ್ ಕಾಲೇಜು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಇಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ನಡೆಸಿ ಪ್ರಸ್ತುತ ಮಂಗಳೂರಿನಲ್ಲಿ ವೃತ್ತಿ ನಿರತರಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version