Home ಅಪರಾಧ ಲೋಕ ಮಂಗಳೂರು: ಕೇರಳಂ ರಾಜ್ಯ ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿಸಿ 3 ಲಕ್ಷ ವಂಚನೆ

ಮಂಗಳೂರು: ಕೇರಳಂ ರಾಜ್ಯ ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿಸಿ 3 ಲಕ್ಷ ವಂಚನೆ

3
0

ಮಂಗಳೂರು: ಕೇರಳಂ ರಾಜ್ಯದ  ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ. ಅದನ್ನು ಪಡೆದುಕೊಳ್ಳಲು ತೆರಿಗೆ ಹಣ ಕಟ್ಟಬೇಕು ಎಂದು ನಂಬಿಸಿ ಅಪರಿಚಿತ‌ ವ್ಯಕ್ತಿಗಳಿಂದ ಬಂದ‌ ಕರೆಯನ್ನು ನಂಬಿ 3 ಲಕ್ಷದ 81 ಸಾವಿರ ರೂ.ಹಣ ವರ್ಗಾಯಿಸಿ  ವಂಚನೆಗೆ ಒಳಗಾದ ವ್ಯಕ್ತಿ ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 42 ವರ್ಷದ ದೂರುದಾರ ವ್ಯಕ್ತಿಗೆ ಆ.14ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಕೇರಳಂ ರಾಜ್ಯದ ಲಾಟರಿಯಲ್ಲಿ 8 ಲಕ್ಷ ರೂ.‌ಬಹುಮಾನ ಬಂದಿದೆ ಎಂದು ಹೇಳಿದ್ದಾರೆ. ಹಣವನ್ನು ಪಡೆಯಲು ತೆರಿಗೆ ಕಟ್ಟಬೇಕು ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಅಪರಿಚಿತ ವ್ಯಕ್ತಿ ಕಳುಹಿಸಿದ ಗೂಗಲ್ ಪೇ, ಫೋನ್ ಪೇ ಸ್ಕ್ಯಾನರ್ ಗಳಿಗೆ ಆ.15ರಿಂದ 26ರ ವರೆಗೆ ಹಂತ ಹಂತವಾಗಿ 3,81,300 ರೂ. ವರ್ಗಾಯಿಸಿದ್ದಾರೆ.

ಮತ್ತೆ ಕರೆ ಮಾಡಿದ ಅಪರಿಚಿತ ಲಾಟರಿ ಹಣ ಡಬಲ್ ಆಗಿದ್ದು, ಪುನಃ ಟ್ಯಾಕ್ಸ್ ಕಟ್ಟಬೇಕು ಎಂದು ಒತ್ತಾಯಿಸಿದ್ದಾನೆ. ಆಗ ದೂರುದಾರರಿಗೆ ಅದೊಂದು ಮೋಸದ ಜಾಲ ಎಂದು ಅನುಮಾನಗೊಂಡು ಸೈಬರ್ ಹೆಲ್ಪ್ ಲೈನ್ ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here