Home ಸ್ಥಳೀಯ ಸಮಾಚಾರ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಮೀಸಲಾತಿ ಕುರಿತು ಸಮಾಲೋಚನಾ ಸಭೆ

ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಮೀಸಲಾತಿ ಕುರಿತು ಸಮಾಲೋಚನಾ ಸಭೆ

0

ಬೆಳ್ತಂಗಡಿ;  ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ ಇಂದು ಸಮಿತಿಯ ಅಧ್ಯಕ್ಷರಾದ ಸುಂದರ್ ಕಾಶಿಪಟ್ನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಉದ್ದೇಶ ಹಾಗೂ ಮೀಸಲಾತಿ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ಶಿಕ್ಷಕ ಸುಕೇಶ್ ಕೆ ಮಾಲಾಡಿ ಹೇಳಿದರು. ಯುವ ಮುಖಂಡರುಗಳು ಅಭಿಪ್ರಾಯ, ಪ್ರಶ್ನೆ, ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಸಂವಿಧಾನ ರಕ್ಷಣಾ ಸಮಿತಿಯ ಗೌರವ ಸಲಹೆಗಾರರಾಗಿರುವ ಶೇಖರ್ ಕುಕ್ಕೇಡಿ ಇವರು ಸಂವಾದದೊಂದಿಗೆ ಉತ್ತರಿಸಿದರು.

ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಶಿವಾನಂದ ಪಡಂಗಡಿ, ಉಪಾಧ್ಯಕ್ಷ ವಿಜಯ್ ಕುಮಾರ್ ಬಜಿರೆ, ಗೌರವ ಸಲಹೆಗಾರರಾದ ಓಬಯ್ಯ ಆರಂಬೋಡಿ, ಶೇಖರ್ ವಿ ಧರ್ಮಸ್ಥಳ, ಬಾಬಿ ಮಾಲಾಡಿ, ನಾರಾಯಣ ಪುದುವೆಟ್ಟು, ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷರಾದ ದಿನೇಶ್ ಕೊಕ್ಕಡ, ಯುವವಕೀಲೆ ಸವಿತಾ ಇವರುಗಳು ಅನಿಸಿಕೆ ವ್ಯಕ್ತಪಡಿಸಿದರು. ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ‌

ಸುಶ್ಮೀತಾ ಮಾಲಾಡಿ ಸ್ವಾಗತಿಸಿ, ಮಾನ್ಯ ಉಜಿರೆ ವಂದಿಸಿದರು. ವಿನಯ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version