ಬೆಳ್ತಂಗಡಿ; ತಾಲೂಕಿನ ಒಕ್ಕಲಿಗ ಸಮಾಜದ ಬಂಧುಗಳು ಬೆಸ್ಟ್ ಎಂ.ಎಲ್. ಎ ಪ್ರಶಸ್ತಿ ಪಡೆದ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ರವರಿಗೆ ಶಾಸಕರ ಗೃಹ ಮಿಥಿಲಾ ಕ್ಕೆ ತೆರಳಿ ಗೌರವಾರ್ಪಣೆ ಸಲ್ಲಿಸಿದರು.
ಕಳೆದ 8 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವನ್ನು ತಂದು ಸರ್ವರನ್ನು ಒಂದೇ ಭಾವದಿಂದ ನೋಡಿಕೊಂಡು ಪಶ್ಚಿಮ ಮಲೆನಾಡಿನ ಅತಿ ದೊಡ್ಡ ತಾಲೂಕನ್ನು ಮಾದರಿ ಕ್ಷೇತ್ರವಾಗಿ ರೂಪಿಸುವಲ್ಲಿ ಶ್ರಮಿಕನಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಸಮುದಾಯದ ಜೊತೆಗೆ ತಾಲೂಕಿನ ಒಕ್ಕಲಿಗ ಸಮಾಜದ ಹಾಗೂ ಸಮುದಾಯದ ಬಂಧುಗಳ ಅಭಿವೃದ್ಧಿಗೆ ಏಕ ಮನಸ್ಸಿನಿಂದ ಕೆಲಸಮಾಡುತ್ತಿದ್ದು ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಸಮುದಾಯವು ಶಾಸಕರ ತಾಲೂಕಿನಾದ್ಯಂತ ನಿರಂತರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕೆಲಸಗಳಿಗೆ ಬೆಂಬಲವನ್ನು ನೀಡುವುದರ ಜೊತೆಗೆ ಮುಂದೆಯೂ ಒಕ್ಕಲಿಗ ಸಮಾಜ ತಮ್ಮ ಜೊತೆಯಲ್ಲಿ ಇದ್ದು ಇನ್ನಷ್ಟು ಅತ್ಯುನ್ನತ ಗೌರವ ಪ್ರಶಸ್ತಿಗಳು ರಾಜಕೀಯ ಜೀವನದಲ್ಲಿ ಇನ್ನಷ್ಟು ಅತ್ಯುನ್ನತ ಗೌರವ ಸಿಗಲಿ ಎಂದು ಶ್ರೀ ಕಾಲ ಭೈರವೇಶ್ವರ ಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು. ತಾಲೂಕಿನ. ವಿವಿಧ ಭಾಗಗಳಿಂದ ಒಕ್ಕಲಿಗ ಸಮುದಾಯದ ಬಂಧುಗಳು ಆಗಮಿಸಿ ಮಾನ್ಯ ಶಾಸಕರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ತಾಲೂಕಿನ ಒಕ್ಕಲಿಗ ಸಮಾಜದ ಪ್ರತಿಯೊಬ್ಬ ಬಂಧುಗಳಿಗೂ ತನ್ನಿಂದ ಯಾವಾಗಲೂ ಸಹಕಾರ ಇರುತ್ತದೆ ಜೊತೆಗೆ ಗೌರವ ಅರ್ಪಣೆ ಸಲ್ಲಿಸಿದ ಎಲ್ಲಾರಿಗೂ ವಂದನೆಗಳನ್ನು ಸಲ್ಲಿಸಿದರು.
