Home ಅಪರಾಧ ಲೋಕ ಬೆಳ್ತಂಗಡಿ : ಗೇರುಕಟ್ಟೆ ಸುಮಂತ್ ಅನುಮಾನಸ್ಪದ ಸಾವು ಪ್ರಕರಣ; ಸಹೋದರನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮುಕ್ತಾಯ

ಬೆಳ್ತಂಗಡಿ : ಗೇರುಕಟ್ಟೆ ಸುಮಂತ್ ಅನುಮಾನಸ್ಪದ ಸಾವು ಪ್ರಕರಣ; ಸಹೋದರನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮುಕ್ತಾಯ

0

ಬೆಳ್ತಂಗಡಿ : ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಬ್ರಮಣ್ಯ ನಾಯಕ್ ಮತ್ತು ರತ್ನಾವತಿ ದಂಪತಿಗಳ ಪುತ್ರ ಶಾಲಾ ವಿದ್ಯಾರ್ಥಿ ಸುಮಂತ್ (14) ಎಂಬಾತ 14-01-2026 ರಂದು ಬೆಳಗ್ಗಿನ ಜಾವ ಕಳಿಯ ಗ್ರಾಮದ ಮನೆಯ ಹತ್ತಿರದ ಮನೆಯ ತೋಟದ ಕೆರೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ಬೆಳ್ತಂಗಡಿ ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಪ್ರಕ್ರಿಯೆ ನಡೆಸಿ ಮುಕ್ತಾಯ ಮಾಡಲಾಗಿದೆ.

ಬೆಂಗಳೂರಿನ ಮಾಡಿವಾಳ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮೃತ ಸುಮಂತ್ ಸಹೋದರ ಸುದರ್ಶನ್ ಅವರನ್ನು ಆ.28 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ತನಕ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ.ನಾಳೆ ಕೂಡ ಈ ಪ್ರಕ್ರಿಯೆ ಮುಂದುವರಿಯಲಿದ್ದು ಮಾವ ರಾಧಕೃಷ್ಣರ ಬಳಿಕ ಮತ್ತೊಬ್ಬ ಮಾವ ಲಕ್ಷ್ಮೀ ನಾರಾಯಣ ಅವರ ಮಂಪರು ಪರೀಕ್ಷೆ ನಡೆಯಲಿರುವುದು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದಲ್ಲಿ ಆ.28 ರಂದು ಕರೆದುಕೊಂಡು ಹೋಗಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಎರಡನೇ ಗಂಭೀರ ಪ್ರಕರಣದ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಮೊದಲು ಕುಟುಂಬದ ಐವರನ್ನು ಬೆಂಗಳೂರಿಗೆ ಕರೆದೊಯ್ದು ಮೊದಲ ಹಂತದ ತನಿಖೆ ನಡೆಸಲಾಗಿತ್ತು. ಆ.10 ರಂದು ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿಯವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಪ್ರಶ್ನಿಸಲಾಗಿತ್ತು.

ಆ.11 ರಂದು ರತ್ನಾವತಿ ಸಹೋದರ ರಾಧಾಕೃಷ್ಣ ಹಾಗೂ ಸಂಬಂಧಿ ಲಕ್ಷ್ಮೀನಾರಾಯಣ ಮಗ ಸುದರ್ಶನ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಈ ಐವರಿಂದ ಪಡೆದ ಉತ್ತರಗಳು ಹಾಗೂ ತನಿಖೆ ವೇಳೆ ದಾಖಲಾದ ಮಾಹಿತಿಯನ್ನು ತಾಳೆಹಾಕಿ ಪರಿಶೀಲಿಸುವ ಕಾರ್ಯವನ್ನು ತಜ್ಞರು ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತರನ್ನೂ ಮುಂದಿನ ದಿನಗಳಲ್ಲಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೊಳಪಡಿಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ನಡೆಸಿಕೊಂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version