Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ದೇವರಾಜ ಅರಸು ಜನ್ಮ ದಿನಾಚರಣೆ; ಅರಸು ಅವರು ಧ್ವನಿ ಯಿಲ್ಲದವರ ಧ್ಚನಿಯಾಗಿದ್ದರು; ಪದ್ಮನಾಭ ಸಾಲಿಯಾನ್

ಬೆಳ್ತಂಗಡಿ: ದೇವರಾಜ ಅರಸು ಜನ್ಮ ದಿನಾಚರಣೆ; ಅರಸು ಅವರು ಧ್ವನಿ ಯಿಲ್ಲದವರ ಧ್ಚನಿಯಾಗಿದ್ದರು; ಪದ್ಮನಾಭ ಸಾಲಿಯಾನ್

3
0

ಬೆಳ್ತಂಗಡಿ: ಶೋಷಿತ ಸಮುದಾಯಗಳನ್ನು ಸಮಾಜದ‌ ಮುಖ್ಯವಾಹಿನಿಗೆ‌ ತರುವ ನಿಟ್ಟಿನಲ್ಲಿ ದೇವರಾಜ ಅರಸು ಅವರ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿದೆ.
ಧ್ವನಿಯಿಲ್ಲದವರಿಗೆ ಧ್ವನಿ‌ನೀಡುವ ಕಾರ್ಯವನ್ನು ಮಾಡಿದ ಇವರ ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್‌ ಹೇಳಿದರು.
ಅವರು ಬೆಳ್ತಂಗಡಿ ತಾಲೂಕು ಪಂಚಾಯತಿನಲ್ಲಿ ತಾಲೂಕು ಆಡಳಿತದ‌ ನೇತೃತ್ವದಲ್ಲಿ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ‌.ದೇವರಾಜು ಅರಸು ರವರ 111 ನೇ ಜನದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಭೂ ಸುಧಾರಣೆಯ ಮೂಲಕ ರಾಜ್ಯದ ಲಕ್ಷಾಂತರ ಬಡವರನ್ನು ಭೂ ಮಾಲಕರನ್ನಾಗಿ ಮಾಡುವ ಕಾರ್ಯವನ್ನು ಅತ್ಯಂತ ಪ್ರಾಮಣಿಕವಾಗಿ ಅವರು ಮಾಡಿದರು ಎಂದು ನೆನಪಿಸಿದರು.
ಕಾರ್ಯಕ್ರಮದ ಆದ್ಯಕ್ಷತೆಯನ್ನು ಬೆಳ್ತಂಗಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್‌ ವಹಿಸಿದ್ದರು.
ದಿಕ್ಸೂಚಿ ಭಾಷಣ ಮಾಡಿದ
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಉಜಿರೆಯ ವಿದ್ಯಾರ್ಥಿನಿ ಪ್ರಿಯಾ
ಶ್ರಮಿಕ ವರ್ಗದವರಿಗೆ ಅಧಿಕಾರ ನೀಡಿದ ರಾಜಕಾರಣಿ ದೇವರಾಜ‌ ಅರಸು ಅವರಾಗಿದ್ದಾರೆ. ತಮ್ಮದೇ ಆದ ಕಾರ್ಯಯೋಜನೆಗಳ‌ಮೂಲಕ ಅವರು ಶೋಷಿತ ಸಮುದಾಯಗಳನ್ನು ಸಬಲರಾಗಿಸುವ ಕಾರ್ಯ ಮಾಡಿದ್ದಾರೆ. ಅವರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ತಲುಪಿದೆ‌ ಎಂದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತು ಮುಖ್ಯಾಧಿಕಾರಿ
ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ
ಡಾ.ರಾಜಲಕ್ಷ್ಮಿ ಹಾಗೂ ಇತರರು ಇದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಜೋಸೆಫ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here