Home ಶಾಲಾ ಕಾಲೇಜು ಧರ್ಮಸ್ಥಳ ಕನ್ಯಾಡಿ  ಉನ್ನತೀಕರಿಸಿದ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಸಂಭ್ರಮದ‌ ಸ್ವಾತಂತ್ರ್ಯ ದಿನಾಚರಣೆ

ಧರ್ಮಸ್ಥಳ ಕನ್ಯಾಡಿ  ಉನ್ನತೀಕರಿಸಿದ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಸಂಭ್ರಮದ‌ ಸ್ವಾತಂತ್ರ್ಯ ದಿನಾಚರಣೆ

3
0

ಕನ್ಯಾಡಿ 2 : 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು ದಾನಿಗಳಾದ ಶ್ರೀ ಮಹೇಶ್ ಆಚಾರ್ಯ ಇವರ ತಂದೆ ದಿವಂಗತ ಪ್ರಭಾಕರ ಆಚಾರ್ಯ ರವರ ಸ್ಮರಣಾರ್ಥ ನೂತನ ದ್ವಜಕಟ್ಟೆಯನ್ನು ನಿರ್ಮಿಸಿ ಕೊಟ್ಟು , ಈ ಶುಭ ದಿನದಂದು ಹಸ್ತಾಂತರ ಮಾಡಿದರು ಮತ್ತು ಉದ್ಘಾಟನೆಯನ್ನು ಅವರ ಮಾತೃಶ್ರೀ ಶ್ರೀಮತಿ ವಿಜಯಲಕ್ಷ್ಮೀ ಮೇಡಂರವರ ದಿವ್ಯ ಹಸ್ತದಿಂದ ನೆರವೇರಿಸಿದರು.ನಮ್ಮಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಅರುಣ್ ಕುಮಾರ್ ಶೆಟ್ಟಿ, ದೊಂಡೋಲೆ ನಿವೃತ್ತ ಯೋಧರು ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮತ್ತು “ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸದಾಸಿದ್ಧರಿ ರುವ ಸೈನಿಕರೆ ಭಾರತದ ನಿಜವಾದ ಶಕ್ತಿಗಳು” “ಸೇವೆಯೆಂದು ಬಂದಾಗ ನಮ್ಮ ಮೊದಲ ಆದ್ಯತೆ, ದೇಶವೇ ಆಗಿರುತ್ತದೆ”ಎನ್ನುವ ಸ್ಫೂರ್ತಿ ದಾಯಕ ನುಡಿಗಳ ಮೂಲಕ ದೇಶ ಭಕ್ತಿಯನ್ನು ಗೌರವಿಸಿದರು. ಈ ಶುಭ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಕೆ.ನಂದ ಇವರು ಧ್ವಜಾರೋಹಣ ನೆರವೇರಿಸಲು ಕೈ ಜೋಡಿಸಿದರು ಮತ್ತು ಶುಭವನ್ನು ಹಾರೈಸಿದರು. ಮಹಾತ್ಮ ಗಾಂಧೀಜಿ ಮತ್ತು ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಗೌರವವನ್ನು ಸೂಚಿಸಲಾಯಿತು . ಶಾಲಾ ನಾಯಕ ಲವಿತ್ ರವರ ನೇತೃತ್ವದಲ್ಲಿ, ಘೋಷಣೆಯನ್ನು ಮಕ್ಕಳು ಹೇಳುವ ಮೂಲಕ ಹುತಾತ್ಮರಿಗೆ ಗೌರವವನ್ನು ಸಲ್ಲಿಸಲಾಯಿತು ಮತ್ತು ನಮ್ಮ ಶಾಲೆಯ ಸಹಶಿಕ್ಷಕರಾದ ನಾಗರಾಜ ಬಾರ್ಕೆರ್ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ಮತ್ತು ವಿದ್ಯಾರ್ಥಿ ಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಶುಭ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಶ್ರೀ ರಾಜೇಂದ್ರ ಅಜ್ರಿ, ಶ್ರೀ ಸುಂದರ ಗೌಡ ಪುಡ್ಕೆತು, ನವೀನ್ ಚಂದ್ರ ಶೆಟ್ಟಿ, ಶ್ರೀ ಪ್ರಭಾಕರ್ ಗೌಡ ಬೊಳ್ಮಾ , ಶ್ರೀ ನೀಲಕಂಠ ಶೆಟ್ಟಿ, ದಾನಿಗಳಾದ ಶ್ರೀಮತಿ ಪವಿತ್ರ ಸುಕುಮಾರ್ ಶೆಟ್ಟಿ ಕನ್ಯಾಡಿ -ll ಬೃಂದಾವನ, ಹಿರಿಯ ವಿದ್ಯಾರ್ಥಿ ಸುದರ್ಶನ್ ಕೆ.ವಿ ಕನ್ಯಾಡಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿ ಅರುಣ್ ಕುಮಾರ್ ಶೆಟ್ಟಿ ನಿವೃತ್ತ ಯೋಧರನ್ನು ಮತ್ತು ನೂತನ ದ್ವಜಕಟ್ಟೆಯನ್ನು ಉದ್ಘಾಟನೆ ಮಾಡಿದ ಶ್ರಿಮತಿ ವಿಜಯ ಲಕ್ಷ್ಮಿ ಮೇಡಂ ರವರನ್ನು ಗೌರವಿಸಲಾಯಿತು.ಮಕ್ಕಳ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವು ಸಡಗರದಿಂದ ನೆರವೇರಿತು. ಎಸ್ ಡಿ ಎಂ ಸಿ ಯ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ, ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್, ಎಸ್ ಡಿ ಎಮ್ ಸಿ ಸದಸ್ಯರು ,ಶಾಲಾ ಶಿಕ್ಷಕ ವೃಂದದವರು, ಪೋಷಕರು, ಶಾಲಾ ಮಕ್ಕಳು , ಅಕ್ಷರ ದಾಸೋಹ ಸಿಬ್ಬಂದಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ , ಅತಿಥಿ ಶಿಕ್ಷಕರಾದ ಶ್ರೀಮತಿ ಸಂಧ್ಯಾಶ್ರೀ ವಂದಿಸಿ ಮತ್ತು ಸಹ ಶಿಕ್ಷಕರಾದ ಶ್ರೀಮತಿ ದೀಪಿಕಾ ಕಾರ್ಯ ಕ್ರಮವನ್ನು
ನಿರೂಪಿಸಿದರು. ಮಕ್ಕಳಿಗೆ ಬೆಳಗಿನ ಉಪಾಹಾರದ ವ್ಯವಸ್ಥೆಯನ್ನು , ಸಿಹಿ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here