ಬೆಳ್ತಂಗಡಿ; ಉಜಿರೆ ನೀರಚಿಲುಮೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಬಸ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ಆ11 ರಂದು ನಡೆದಿದ್ದು ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರುವುದನ್ನು ಕಂಡುಕೊಂಡ ಪೊಲೀಸರು ಬಸ್ ಚಾಲಕ ಬಸಪ್ಪ ರಾಯಪ್ಪ ವಿರುದ್ಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೋಮನಾಥ್ ಚಲಾಯಿಸುತ್ತಿದ್ದ ಬೈಕಿಗೆ ನೀರಚಿಲುಮೆ ಯಲ್ಲಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಸೋಮನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದ .
ಬೆಳ್ತಂಗಡಿ ಪೊಲೀಸರು ಒಟ್ಟು ಅಪಘಾತದ ಬಗ್ಗೆ ಪರಿಶೀಲನೆ ನಡೆಸಿದ್ದು ಉಜಿರೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಬೈಕಿಗೆ ಧರ್ಮಸ್ಥಳ ದಿಂದ ಮಂಗಳೂರಿಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಕೆ.ಎ 19F 3342 ನ್ನು ಅದರ ಚಾಲಕ ಬಸ್ಸನ್ನು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿದ್ದು ಬೈಕ್ ಗೆ ಡಿಕ್ಕಿ ಹೊಡೆದಿದ್ದು ಹೊಡೆತದ ರಭಸಕ್ಕೆ ಡಾಮರು ರಸ್ತೆಗೆ ಬಿದ್ದ ಬೈಕ್‌ಸವಾರ ಮೃತಪಟ್ಟಿರುವುದಾಗಿದ್ದು ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಕಲಂ 281, 125(a), 106,(1),ಬಿಎನ್ ಎಸ್ ನಂತೆ ಬಸ್ ಚಾಲಕ ಬಸಪ್ಪ ರಾಯಪ್ಪ ವಿರುದ್ದ ಪ್ರಕರಣದಾಖಲಿಸಿದ್ದಾರೆ.










