Home ಅಪರಾಧ ಲೋಕ ಪುತ್ತೂರು : ಸಕಲೇಶಪುರದಿಂದ ಮಂಗಳೂರಿಗೆ ಅಕ್ರಮವಾಗಿ ಮರದ ದಿಮ್ಮಿ ಸಾಗಾಟ ಪತ್ತೆ ಆರೋಪಿಗಳ ಬಂಧನ

ಪುತ್ತೂರು : ಸಕಲೇಶಪುರದಿಂದ ಮಂಗಳೂರಿಗೆ ಅಕ್ರಮವಾಗಿ ಮರದ ದಿಮ್ಮಿ ಸಾಗಾಟ ಪತ್ತೆ ಆರೋಪಿಗಳ ಬಂಧನ

5
0

ಪುತ್ತೂರು : ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿ 75 ಯಲ್ಲಿ ಆ.3 ರಂದು ಸಕಲೇಶಪುರದಿಂದ ಅಕ್ರಮವಾಗಿ ಕಾಡು ಜಾತಿಯ ವಿವಿಧ ಮರದ ದಿಮ್ಮಿಗಳನ್ನು KA-13-AA-6340 ನಂಬರಿನ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಮಂಗಳೂರಿಗೆ ಸಾಗಾಟ ಮಾಡುತ್ತಿರುವುದನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ವಾಹನ ಮತ್ತು ಮರದ ಮೌಲ್ಯ ಅಂದಾಜು 10 ಲಕ್ಷ ರೂಪಾಯಿ ಅಗಿರುತ್ತದೆ. ಮಂಡ್ಯ ಜಿಲ್ಲೆಯ ಹೊಳೆನರಸೀಪುರ ನಿವಾಸಿ  ರೋಹಿತ್.ಎಸ್(20) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಹೆಚ್.ಪಿ.ರಾಘವೇಂದ್ರ ,ಉಪ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್ , ಗಸ್ತು ಅರಣ್ಯ ಪಾಲಕ ವಿನಯಚಂದ್ರ , ದೀಕ್ಷಾ.ಕೆ ಹಾಗೂ ವಾಹನ ಚಾಲಕ ಕಿಶೋರ್ ಕುಮಾರ್.ಕೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here