
ಅರಸಿನಮಕ್ಕಿ: ಅರಸಿನಮಕ್ಕಿ-ಶಿಶಿಲ ರಸ್ತೆಯ ಬರ್ಗುಳ ಸಮೀಪ ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಬಿದ್ದ ಘಟನೆ ನಡೆದಿದೆ. ಶಿಶಿಲ ದೇನೋಡಿ ನಿವಾಸಿ ರತೀಶ್ ಪೂಜಾರಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಮರ ಹಠಾತ್ತನೆ ಬೈಕ್ ಮೇಲೆ ಬಿದ್ದಿದೆ.
ಪರಿಣಾಮ ಬೈಕ್‌ಗೆ ಹಾನಿಯಾಗಿದ್ದು, ರತೀಶ್ ಪೂಜಾರಿ ಅವರು ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತಿನ ಅರಸಿನಮಕ್ಕಿ -ಶಿಶಿಲ ಘಟಕದ ಸದಸ್ಯರು ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು.
ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿಗಳು ಹಾಗೂ ಮೆಸ್ಕಾಂ ನವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.