
ಬೆಳ್ತಂಗಡಿ; ದ.ಕ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ ಎಂ ದೇವದಾಸ್ ಅವರ ನಿಧನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಗೆ ತುಂಬಲಾಗದ ನಷ್ಟ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಮಿತಿ ಸಂತಾಪ ಸೂಚಿಸಿದೆ.
ರಾಜ್ಯದ ದಲಿತ ಚಳವಳಿಯ ಹಿರಿಯ ಕೊಂಡಿಯಾಗಿರುವ ದೇವದಾಸ್ ರವರ ನಿಧನ ಇಡೀ ಚಳವಳಿಗೆ ದುಃಖವನ್ನು ತಂದಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಪ್ರಗತಿಪರ ಚಳವಳಿಗೂ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕುಟುಂಬದ ದುಃಖದಲ್ಲಿ ದಲಿತ ಸಂಘರ್ಷ ಸಮಿತಿಯ ಎಲ್ಲಾ ಕಾರ್ಯಕರ್ತರು , ಪದಾಧಿಕಾರಿಗಳು ಭಾಗಿಯಾಗಿದ್ದೇವೆ ಎಂದು ದಸಂಸ(ಅಂಬೇಡ್ಕರ್ ವಾದ) ದ ಮೈಸೂರು ವಿಭಾಗ ಸಂ ಸಂಚಾಲಕ ಬಿ.ಕೆ ವಸಂತ , ತಾಲೂಕು ಸಂಚಾಲಕ ರಮೇಶ್ ಆರ್ , ಪದಾಧಿಕಾರಿಗಳಾದ ಶೇಖರ್ ಕುಕ್ಕೇಡಿ , ವೆಂಕಣ್ಣ ಕೊಯ್ಯೂರು , ಶ್ರೀಧರ್ ಕಳೆಂಜ , ನೇಮಿರಾಜ್ ,
ನಾರಾಯಣ ಪುದುವೆಟ್ಟು ಕೆ.ನೇಮಿರಾಜ್ ಕಿಲ್ಲೂರು , ಶೇಖರ್ ಕಣಿಯೂರು , ದಲಿತ ನಾಯಕರುಗಳಾದ ಸಂಜೀವ ಆರ್ , ಪ್ರಭಾಕರ್ ಶಾಂತಿಗೋಡು , ಚೆನ್ನಕೇಶವ , ಅಚುಶ್ರೀ ಬಾಂಗೇರು ,
ಶೇಖರ್ ಲಾಯಿಲ ಮಲೆಕುಡಿಯ ಸಂಘದ ಮುಖಂಡ ಜಯಾನಂದ ಪಿಲಿಕಲ ಸಂತಾಪ ಸೂಚಿಸಿದ್ದಾರೆ .