
ಬೆಳ್ತಂಗಡಿ: ಮಳೆಗಾಲದಲ್ಲಿ ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟದ
ಜಲಪಾತಗಳು ಹಸಿರಿನ ನಡುವೆ ರುದ್ರರಮಣೀಯವಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚಿನ
ಪ್ರವಾಸಿಗರನ್ನುಆಕರ್ಷಿಸುತ್ತದೆ. ಕಳೆದ ಕೆಲ ದಿನಗಳಿಂದ ನಾಡಿನಲ್ಲಿ ಉತ್ತಮ ಮಳೆ ಸುರಿಯುತ್ತಿದ್ದ ಜಿಲ್ಲೆಯಲ್ಲಿ ಆರೆಂಜ್ ಆಲರ್ಟ್ ಘೋಷಣೆಯಾದ ಪರಿಣಾಮ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಯ ಹಿನ್ನಲೆ ನಾಳೆಯಿಂದ ಜು. 20 ರಿಂದ ಕಡಮಗುಂಡಿ, ಬೊಲ್ಲೆ ಜಲಪಾತ ವೀಕ್ಷಣೆಗೆ ಮುಂದಿನ ಆದೇಶದವರೆಗೆ ನಿಷೇಧ ಹೇರಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಲಯ ಪ್ರಕಟಣೆ ತಿಳಿಸಿದೆ.









