Home ಅಪರಾಧ ಲೋಕ ಬಿ.ಸಿ ರೋಡ್ ಕೊಲೆ ಪ್ರಕರಣ ಆರೋಪಿಯ ಫೊಟೋ ತಿರುಚಿ ಭಜರಂಗದಳದ ವಿರುದ್ದ ಅಪಪ್ರಚಾರ ಆರೋಪ ಪ್ರಕರಣ...

ಬಿ.ಸಿ ರೋಡ್ ಕೊಲೆ ಪ್ರಕರಣ ಆರೋಪಿಯ ಫೊಟೋ ತಿರುಚಿ ಭಜರಂಗದಳದ ವಿರುದ್ದ ಅಪಪ್ರಚಾರ ಆರೋಪ ಪ್ರಕರಣ ದಾಖಲು

6
0

ಬೆಳ್ತಂಗಡಿ; ಬಂಟ್ವಾಳ ತಾಲೂಕಿನ ಬಿ‌ಸಿ.ರೋಡ್ ನಲ್ಲಿ ಯುವತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದ‌ ಆರೋಪಿ ಚೇತನ್ ನ ಫೊಟೋವನ್ನು ಎಡಿಟ್ ಮಾಡಿ ಕೇಸರಿ ಶಾಲು ಹಾಕಿ ಕುಂಕುಮ‌ ಹಾಕಿ ಭಜರಂಗದಳದ ಮುಖಂಡ‌ಚೇತನ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೋಮು ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸಿದ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ವಾಟ್ಸಾಪ್ ಗ್ರೂಪ್ ಗಳ ಹಾಗೂ ಇತರ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ದ ಪ್ರಕರಣ‌ ದಾಖಲಿಸಲಾಗಿದೆ.
ಈ ಬಗ್ಗೆ ವಿಶ್ಚಹಿಂದೂ ಪರಿಷತ್ ಉಪಾಧ್ಯಕ್ಷ
ಕೇಶವವ ಎಂಬವರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿಯ ಕೆಲವೊಂದು ವಾಟ್ಸಪ್ ಗ್ರೂಪ್ ಗಳು ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here