Home ಅಪರಾಧ ಲೋಕ ಬೆಳ್ತಂಗಡಿ : ಕುವೆಟ್ಟು ಮುಸ್ತಾಕ್ ಅನುಮಾ ನಾಸ್ಪದ ಸಾವು ಪ್ರಕರಣಕ್ಕೆ ತಿರುವು,  ಮತ್ತೊಂದು ಪ್ರಕರಣ ದಾಖಲು

ಬೆಳ್ತಂಗಡಿ : ಕುವೆಟ್ಟು ಮುಸ್ತಾಕ್ ಅನುಮಾ ನಾಸ್ಪದ ಸಾವು ಪ್ರಕರಣಕ್ಕೆ ತಿರುವು,  ಮತ್ತೊಂದು ಪ್ರಕರಣ ದಾಖಲು

0

ಬೆಳ್ತಂಗಡಿ : ಕುವೆಟ್ಟುಗ್ರಾಮದ ಶಕ್ತಿನದರದಲ್ಲಿ ಅಸಹಜ‌ಸ್ಥಿತಿಯಲ್ಲಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ‌ಹೊಸ‌‌ ಬೆಳವಣಿಗೆಗಳು ನಡೆದಿದ್ದು‌ ಇಲ್ಲಿಂದ ವಯರದ‌ಹಾಗೂ ಇತರ ವಸ್ತುಗಳು ಕಳ್ಳತನವಾಗಿರುವ ನಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಕುವೆಟ್ಟು ಗ್ರಾಮದ ಶಕ್ತಿನಗರ ಎಂಬಲ್ಲಿರುವ ಎಸ್.ಎಲ್.ವಿ ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ನಲ್ಲಿ 01-07-2026 ರಂದು ರಿಸೀವಿಂಗ್ ಸ್ಟೇಷನ್ ಕಂಪೌಂಡ್ ನ ಒಳಗೆ ತೊಂಡೆಕಾಯಿ ಬೆಳೆಯಲು ಚಪ್ಪರಕ್ಕೆ ಹಾಕಿದ್ದ ಜಿಐ ಸ್ಟೀಲ್ ವಯರ್ ಗೆ ಸಿಲುಕಿ ಅಥವಾ ಇನ್ಯಾವುದೋ ರೀತಿಯಲ್ಲಿ ಮೃತಪಟ್ಟ ರೀತಿಯಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಜನತಾ ಕಲೋನಿ ನಿವಾಸಿ ಶರೀಫ್.ಕೆ ಮಗ ಮುಸ್ತಾಕ್(27) ಎಂಬಾತನ ಮೃತದೇಹ ಪತ್ತೆಯಾಗಿತ್ತು.
ಪ್ರಕರಣದಲ್ಲಿ ಮೃತಪಟ್ಟ ಮುಸ್ತಾಕ್ ನ ಮೃತದೇಹ ಪತ್ತೆಯಾದ ಸ್ಥಳದ ಹತ್ತಿರ ರಿಸಿವಿಂಗ್ ಸ್ಟೇಷನ್ ನ ಕಂಪೌಂಡ್ ಒಳಗೆ ಉಪಯೋಗಿಸಿ ಉಳಿದ ಹಳೆಯ ಅಲ್ಯೂಮಿನಿಯಂ ವಯರ್ ತುಂಡುಗಳು ಬಿದ್ದಿರುವುದನ್ನು ಕಂಡು ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್ ರಾಜೇಂದ್ರನ್ ಅವರು ತಮ್ಮ ರಿಸೀವಿಂಗ್ ಸ್ಟೇಷನ್ ನ ಕಂಪೌಂಡ್ ಒಳಗೆ ಇರಿಸಿದ ಅಲ್ಯೂಮಿನಿಯಂ ವಯರ್ ನ ಬಂಡಲ್ ಗಳು, ಮತ್ತು ಇನ್ನಿತರ ಸಲಕರಣೆಗಳನ್ನು ಪರಿಶೀಲನೆ ನಡೆಸಿದಾಗ ಹಳೆಯ ಅಲ್ಯೂಮಿನಿಯಂ ವಯರ್ ಗಳು ಕಳ್ಳತನವಾಗಿರುವುದು ತಿಳಿದು ಈ ವಿಚಾರ ಮೇಲಾಧಿಕಾರಿಗಳಿಗೆ ತಿಳಿಸಿದ ಬಳಿಕ ಮೇಲಾಧಿಕಾರಿಗಳು ಬಂದು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಮೌಲ್ಯ ಸುಮಾರು 1100 ಕೆಜಿಯಷ್ಟು ಹಳೆಯ ಅಲ್ಯೂಮಿನಿಯಂ ವಯರ್ ಗಳು ಕಳ್ಳತನವಾಗಿರುವುದಾಗಿ ಎಸ್. ಎಲ್. ವಿ ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ನಲ್ಲಿ ಮ್ಯಾನೇಜರ್ ಆಗಿರುವ ರಾಜೇಂದ್ರನ್(50) ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದ ಮೃತಪಟ್ಟ ಮುಸ್ತಾಕ್ ಮತ್ತು ಇತರರ ವಿರುದ್ಧ ಕಲಂ: 331(4), 305 ಜೊತೆಗೆ 3(5)ಬಿ. ಎನ್ ಎಸ್ ಯಂತೆ ಜು.11 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version