
ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕ ಬಾವುಟ ಗುಡ್ಡ ಎಂಬಲ್ಲಿ ಗಾಂಜಾಸೇವನೆ ಮಾಡುತ್ತಿದ್ದ ಇಬ್ಬರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಪಾದಿತರಾದ ಮಹಮ್ಮದ್ ಕಾನಿಶ್ ( 21 ) ವರ್ಷ, ಬಾವುಟಗುಡ್ಡೆ ಮನೆ, ಮದ್ದಡ್ಕ ಕುವೆಟ್ಟು ಗ್ರಾಮ ಹಾಗೂ ಮಹಮ್ಮದ್ ಕೈಸ್ ಪ್ರಾಯ 23 ವರ್ಷ, ಬಾವುಟ ಗುಡ್ಡ ಮನೆ, ಮದ್ದಡ್ಕ ಕುವೆಟ್ಟು ಗ್ರಾಮ ಎಂಬವರೇ ಗಾಂಜಾಸೇವನೆ ಮಾಡಿದ ಆರೋಪಿಗಳಾಗಿದ್ದಾರೆ.
ಆನಂದ ಎಂ, ಪೊಲೀಸ್ ಉಪ ನಿರೀಕ್ಷಕರಾದ ಆನಂದ ಎಂ ಜು 11 ರಂದು ಇಲಾಖಾ ಜೀಪಿನಲ್ಲಿ ಠಾಣಾ ಸರಹದ್ದಿನ ಗುರುವಾಯನಕೆರೆ, ಮದ್ದಡ್ಕ ಸಬರಬೈಲು ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇರುವ ಸಮಯ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಬಾವುಟಗುಡ್ಡೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತರಾದ ಮಹಮ್ಮದ್ ಕಾನಿಶ್ ( 21 ವರ್ಷ,) ಮತ್ತು ಮಹಮ್ಮದ್ ಕೈಸ್ (ಪ್ರಾಯ 23 ವರ್ಷ) ಎಂಬವರು ಅಮಲಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಅವರ ಬಳಿ ಹೋಗಿ ಅವರನ್ನು ವಿಚಾರಿಸಿದಾಗ ನಶೆಯ ಅಮಲಿನಲ್ಲಿ ಉತ್ತರಿಸುತ್ತಾ ಸಮರ್ಪಕವಾಗಿ ಉತ್ತರ ನೀಡದೇ ಇದ್ದವರನ್ನು ಮತ್ತೆ ಮತ್ತೆ ವಿಚಾರಿಸಲಾಗಿ ನಿಷೇದಿತ ಮಾಧಕ ವಸ್ತುವಾದ ಗಾಂಜಾ ಕೊಕೇನ್, ಆಂಪಿಟಮಿನ್ ನ್ನು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದು ಇವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 27(ಎ)ಮತ್ತು 27(ಬಿ) ಎನ್ಡಿಪಿಎಸ್ ಆಕ್ಟ್ ಯಂತೆ ಪ್ರಕರಣ ದಾಖಲಾಗಿದೆ.