ಬೆಳ್ತಂಗಡಿ: ಸೀರೋ ಮಲಬಾರ್ ಮಾತೃವೇದಿ ಸಂತ ಲಾರೆನ್ಸ್ ಪ್ರಧಾನ ದೇವಾಲಯ ಬೆಳ್ತಂಗಡಿ ಇದರ ವತಿಯಿಂದ ಸರಕಾರಿ ಉನ್ನತೀಕರಿಸಿದ ಪ್ರಥಮಿಕ ಶಾಲೆ ಪಡಂಗಡಿಯಲ್ಲಿ “ವಿದ್ಯಾದೀಪ” ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾಸಮವಸ್ತ್ರ ಸಹಾಯಧನ ವಿರತಣೆ ಕಾರ್ಯಕ್ರಮ ನಡೆಯಿತು.
ಶಾಲೆಯ ವಿದ್ಯಾರ್ಥಿಗಳ ಸಮವಸ್ತ್ರ ಸಹಾಯಧನವಾಗಿ ರೂ 12,000 ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಮಾತೃವೇದಿ ಸಂಘಟನೆಯ ನಿರ್ದೇಶಕರಾದ ಫಾ. ಜೋಬಿ ಪುಲ್ಲಾಟ್, ಸಂತ ಲಾರೆನ್ಸ್ ಪ್ರಧಾನ ದೇವಾಲಯ ಬೆಳ್ತಂಗಡಿ ಇಲ್ಲಿನ ಧರ್ಮಗುರುಗಳಾದ ಫಾ.ಜೋಸ್ ಆಯಾಂಕುಡಿ ಹಾಗೂ ಮಾತೃವೇದಿ ಸಂಘಟನೆಯ ಪದಾಧಿಕಾರಿಗಳು,
ಶಾಲಾ ಮುಖ್ಯೋ ಪಾಧ್ಯಾಯರು, ಎಸ್.ಡಿ.ಎಂ ಸಿ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು.










