Home ಅಪರಾಧ ಲೋಕ ವೇಣೂರು; ನಿಷೇಧಿತ ಮಾದಕ ವಸ್ತು ಸೇವನೆ ಆರೋಪಿ‌ ಬಂಧನ

ವೇಣೂರು; ನಿಷೇಧಿತ ಮಾದಕ ವಸ್ತು ಸೇವನೆ ಆರೋಪಿ‌ ಬಂಧನ

1
0

ಬೆಳ್ತಂಗಡಿ; ವೇಣೂರು ಮೇಲಿನ ಪೇಟೆಯಲ್ಲಿ ಮಾದಕ‌ವಸ್ತು ಸೇವಿಸಿ ಅಮಲಿನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವೇಣೂರು ಪೊಲೀಸರು ಬಂಧಿಸಿ ಪ್ರಕರಣ‌ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಬೆಳ್ತಂಗಡಿ ಕುಕ್ಕೇಡಿ ನಿವಾಸಿ ಮಹಮ್ಮದ್ ಆಸೀಪ್ (35) ಎಂಬಾತನಾಗಿದ್ದಾನೆ.
ಆ 9 ರಂದು ಮದ್ಯಾಹ್ನ, ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯ ಡವಗಿ ರವರು ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಬೆಳ್ತಂಗಡಿ ವೇಣೂರು ಮೇಲಿನ ಪೇಟೆ ಎಂಬಲ್ಲಿ ತೆರಳಿದಾಗ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನಲ್ಲಿ ವಿಚಾರಿಸಲಾಗಿ ಬೆಳ್ತಂಗಡಿ ಕುಕ್ಕೇಡಿ ನಿವಾಸಿ ಮಹಮ್ಮದ್ ಆಸೀಪ್ (35) ಎಂಬುದಾಗಿ ಹಾಗೂ ತಾನು ನಿಷೇದಿತ ಮಾದಕ ವಸ್ತುವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ಧೃಢಪಟ್ಟಿರುತ್ತದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆ ಅ ಕ್ರ ನಂ : 54/2026 ಕಲಂ: 27(b) ಮತ್ತು 22(a) ಎನ್.ಡಿ.ಪಿ.ಎಸ್ ಆಕ್ಟ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here