Home ಅಪಘಾತ ಬೆಳ್ತಂಗಡಿ; ಬೆಳಾಲಿನಲ್ಲಿ ಬೈಕ್ ಗಳ ನಡುವೆ ಅಪಘಾತ ಮೂವರಿಗೆ ಗಾಯ

ಬೆಳ್ತಂಗಡಿ; ಬೆಳಾಲಿನಲ್ಲಿ ಬೈಕ್ ಗಳ ನಡುವೆ ಅಪಘಾತ ಮೂವರಿಗೆ ಗಾಯ

0

ಬೆಳ್ತಂಗಡಿ; ಬೆಳಾಲು ಗ್ರಾಮದ‌ ಕಾಡಂಡ‌ ಸಮೀಪ ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡದ ಘಟನೆ ಬುಧವಾರ ಸಂಭವಿಸಿದೆ.
ಗಾಯಾಳುಗಳು ಇಳಂತಿಲ ಗ್ರಾಮದ ನಿವಾಸಿ ಸಿಯಾನ್(18), ಖಲಂದರ್ ಶಾಫಿ, ಹಾಗೂ ಮತ್ತೊಂದು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅತಿಶ್ ಎಂಬವರು ಗಾಯಗೊಂಡಿದ್ದಾರೆ.ಇಳಂತಿಲದಿಂದ ಉಜಿರೆಕಡೆಗೆ ಬರುತ್ತಿದ್ದ ಖಲಂದರ್ ಶಾಫಿ ಚಲಾಯಿಸುತ್ತಿದ್ದ ಬೈಕ್ ಗೆ ಉಜಿರೆ ಕಡೆಯಿಂದ ಬಂದ ಅತಿಶ್ ಚಲಾಯಿಸುತ್ತಿದ್ದ ಬೈಕಿಗೆ ನೇರವಾಗಿ ಡಿಕ್ಕಿಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದು ಗಾಯಗೊಂಡ ಗಾಯಾಳುಗಳನ್ನು ಸ್ಥಳೀಯರು ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರವಾಗಿ ಗಾಯಗೊಂಡ ಖಲಂದರ್ ಶಾಫಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version