Home ಅಪಘಾತ ಬೆಳ್ತಂಗಡಿ; ಫುಟ್ಪಾತ್ ಮೇಲೇರಿದ ಕೆ.ಎಸ್.ಆರ್.ಟಿಸಿ ಬಸ್

ಬೆಳ್ತಂಗಡಿ; ಫುಟ್ಪಾತ್ ಮೇಲೇರಿದ ಕೆ.ಎಸ್.ಆರ್.ಟಿಸಿ ಬಸ್

0

ಬೆಳ್ತಂಗಡಿ: ಕೆ ಎಸ್ ಆರ್ ಟಿ ಸಿ ಬಸ್ಸೆಂದು ರಾಷ್ಟ್ರೀಯ ಹೆದ್ದಾರಿ ಬದಿಯ ಪುಟ್ಪಾತ್ ಮೇಲೆ ಹತ್ತಿದ್ದು, ಕಬ್ಬಿಣದ ತಡೆಗೋಡೆ ಪುಡಿ ಪುಡಿಯಾದ ಘಟನೆ ಹಳೇ ಪೇಟೆ ವಾಣಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಮಧ್ಯಾಹ್ನ ನಡೆದಿದೆ. ಗುರುವಾಯನಕೆರೆಯಿಂದ ಕೆ ಎಸ್ ಆರ್ ಟಿ ಸಿ ಬಸ್ಸೆಂದು ಅತೀ ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ನ ಕಬ್ಬಿಣದ ತಡರಗೋಡೆ ಸೇರಿದಂತೆ ಬೀದಿ ದೀಪಗಳ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಬ್ಬಿಣದ ಗಾರ್ಡ್ ಗಳು ಪುಡಿ ಪುಡಿಯಾಗಿದೆ. ಒಂದು ವೇಳೆ ಶಾಲೆ ಬಿಡುವ ಸಮಯದಲ್ಲಿ ಈ ರೀತಿಯ ಘಟನೆ ಸಂಭವಿಸುತಿದ್ದರೆ ದೊಡ್ಡ ಅನಾಹುತ ಸಂಭವಿಸುತಿತ್ತು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಬಸ್ಸಿನ ಮುಂಭಾಗ ನುಜ್ಜುಗುಜ್ಜಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version