Home ಅಪರಾಧ ಲೋಕ ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ತನಗೆ ಜೀವ ಬೆದರಿಕೆ ಇದೆ ಚಿನ್ನಯ್ಯನಿಂದ ಎಸ್ಐಟಿ ಗೆ ದೂರು

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ತನಗೆ ಜೀವ ಬೆದರಿಕೆ ಇದೆ ಚಿನ್ನಯ್ಯನಿಂದ ಎಸ್ಐಟಿ ಗೆ ದೂರು

49
0

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿರುವ ಚಿನ್ನಯ್ಯ ತನಗೆ ಜೀವಬೆದರಿಕೆ ಇರುವ ಬಗ್ಗೆ ಎಸ್. ಐ.ಟಿ ಗೆ ದೂರು ನೀಡಿದ್ದಾನೆ.
ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಜೂ‌.15 ರಂದು ಚಿನ್ನಯ್ಯ ಪತ್ನಿ ಜೊತೆಯಲ್ಲಿ ಬಂದು ನನಗೆ ಮತ್ತು ನನ್ನ ಕುಟುಂಬಕ್ಕೆ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರಿಂದ ಜೀವ ಬೆದರಿಕೆ ಇರುವ ಬಗ್ಗೆ ದೂರು ನೀಡಿದ್ದಾನೆ.

ಹೈಕೋರ್ಟ್ ಗೆ ರಿಟ್ ಪಿಟಿಷನ್ ಹಾಕಿರುವ ಬಗ್ಗೆ ಆಳಿಯ ಪುರುಷೋತ್ತಮ ಹಾಗೂ ಕೆಲವರಿಗೆ ಗಿರೀಶ್ ಮಟ್ಟಣ್ಣವರ್ , ಯುನೈಟೆಡ್ ಮೀಡಿಯಾ ಅಭಿಷೇಕ್ ಕರೆ ಮಾಡಿ ಮಾಹಿತಿಗಳನ್ನು ಕೇಳುತ್ತಿದ್ದು ಇದರಿಂದ ಜೀವಬೆದರಿಕೆ ಇದ್ದು ಪೊಲೀಸ್ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾನೆ.

 

LEAVE A REPLY

Please enter your comment!
Please enter your name here