ಬೆಳ್ತಂಗಡಿ; ಉಜಿರೆ ಪೇಟೆಯ ಸಮೀಪವೇ ಬೆಳ್ತಂಗಡಿ ರಸ್ತೆಯಲ್ಲಿ ಸೋಮವಾರ ಮರವೊಂದು ಹೆದ್ದಾರಿಗೆ ಬುಡ ಸಮೇತ ಉರುಳಿ ಬಿದ್ದು ಮೂರು ವಾಹನಗಳು ಜಖಂಗೊಂಡು ಸಂಚಾರ ಅಸ್ತವ್ಯಸ್ತ ಗೊಂಡ ಘಟನೆ ಸಂಭವಿಸಿದೆ.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆಯೇ ಮರ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ರಜ್ಜು ಗುಜ್ಜಾಗಿದ್ದು ರಿಕ್ಷಾ ಚಾಲಕ ಉಜಿರೆ ಹಳೆಪೇಟೆಯ ರತ್ನಾಕರ(50) ಹಾಗೂ ಪ್ರಯಾಣಿಕ ಹಳೆಪೇಟೆಯ ಸಾಂತಪ್ಪ(47( ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪವಾಡ ಸದೃಶವಾಗಿ ಜೀವಾಪಾಯದಿಂದ ಪಾರಾಗಿದ್ದಾರೆ.
ಮರ ಬೀಳುವ ವೇಳೆ ಎರಡು ಕಾರುಗಳಿಗೂ ಹಾನಿಯಾಗಿದೆ.
ಘಟನೆಯಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ ಉಂಟಾಗಿ ಇಕ್ಕೆಲಗಳಲ್ಲಿ ಮೂರು ಕಿಮೀ.ಗಿಂತ ಅಧಿಕ ದೂರದವರೆಗೆ ವಾಹನಗಳ ಸಾಲು ಕಂಡು ಬಂತ. ಉಜಿರೆ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಮೆಸ್ಕಾಂ,ಚಾಲಕರು ಹಾಗೂ ಸ್ಥಳೀಯರು ಮರತೆರವಿಗೆ ಸಹಕರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
