Home ಸ್ಥಳೀಯ ಸಮಾಚಾರ ಜೂ 14 ರಿಂದ ಗಡಾಯಿಕಲ್ಲಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಜೂ 14 ರಿಂದ ಗಡಾಯಿಕಲ್ಲಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

7
0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಇತಿಹಾಸಪ್ರಸಿದ್ದ ಗಡಾಯಿಕಲ್ಲು ಚಾರಣಕ್ಕೆ ಜೂ. 14 ರಿಂದ ಜಾರಿಗೆ ಬರುವಂತೆ ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಪ್ರವಾಸಿಗರಿಗೆ ನಿಷೇಧ ಹೇರಿದೆ.

ಮಳೆಯಿಂದ ಕಲ್ಲುಗಳು ಜಾರುವ ಕಾರಣ ಪ್ರವೇಶ ನಿಷೇಧ ಹೇರಲಾಗಿದೆ ಎಂದು. ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಜೂ.1 ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡು ಮೊದಲ ವಾರಾಂತ್ಯದ ಆದಿತ್ಯವಾರ ಜೂ.7 ರಂದು 1000ಕ್ಕು ಹೆಚ್ಚು ಮಂದಿ ಪ್ರವಾಸಿಗರು
ವೀಕ್ಷಿಸಿ ಇತಿಹಾಸ ನಿರ್ಮಾಣವಾಗಿತ್ತು. ಜೂ. 1 ರಿಂದ ಪ್ರವಾಸಿಗರ ವಿಕ್ಷಣೇಗೆ ಮುಕ್ತಗೊಂಡಿದ್ದ ಗಡಾಯಿಕಲ್ಲಿನಲ್ಲಿ 13 ದಿನದ ಅಂತರದಲ್ಲಿ ಮತ್ತೋಮ್ಮೆ ಪ್ರವಾಸಿಗರ ವಿಕ್ಷಣಗೆ ನಿಷೇಧ ಹೇರಲಾಗಿದೆ.

LEAVE A REPLY

Please enter your comment!
Please enter your name here