Home ಅಪರಾಧ ಲೋಕ ಬೆಳ್ತಂಗಡಿ; ಆರಂಬೋಡಿಯಲ್ಲಿ 12 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆ ವೇಣೂರು ಪೊಲೀಸರ ಕಾರ್ಯಾಚರಣೆ

ಬೆಳ್ತಂಗಡಿ; ಆರಂಬೋಡಿಯಲ್ಲಿ 12 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆ ವೇಣೂರು ಪೊಲೀಸರ ಕಾರ್ಯಾಚರಣೆ

0

ಬೆಳ್ತಂಗಡಿ : ವೇಣೂರು ಠಾಣಾ ವ್ಯಾಪ್ತಿಯ ಆರಂಬೋಡಿ ನಿಡ್ಯಾಲಬೆಟ್ಟು ಎಂಬಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ಸುಮಾರು 12 ಟಿಪ್ಪರ್ ನಷ್ಟು ಮರಳನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಸುಂದರ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ನೇತೃತ್ವದ ತಂಡ ಜೂನ್.5 ರಂದು ದಾಳಿ ನಡೆಸಿದ್ದು ಅವರನ್ನು ವಿಚಾರಿಸಿದಾಗ ಮರಳನ್ನು ಸ್ಥಳೀಯರಾದ ದಿನೇಶ್ ಕುಲಾಲ್ ಎಂಬವರು ತಮ್ಮ ಟಿಪ್ಪರ್ KA-19-AA-3213 ರಲ್ಲಿ ಅಂಗರಕರಿಯದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಮರಳನ್ನು ತಂದು ತನ್ನ ಜಾಗದಲ್ಲಿ ದಾಸ್ತಾನು ಇರಿಸಿರುವುದಾಗಿ ಇದನ್ನು ಮಾರಾಟಮಾಡಿ ಹಣ ಗಳಿಅಉವ ಉದ್ದೇಶದಿಂದ 90 ಸಾವಿರ ಮೌಲ್ಯದ ಮರಳನ್ನು ಶೇಖರಿಸಿರುವುದಾಗಿ ತಿಳಿಸಿದ್ದು ಅದರಂತೆ ವೇಣೂರು ಮರಳನ್ನು ಮುಟ್ಟುಗೋಲು ಹಾಕಿದ್ದಾರೆ.

ಮರಳಿನ ಅಂದಾಜು ಮೌಲ್ಯ ರೂ 90 ಸಾವಿರ ಎಂದು ಅಂದಾಜಿಸಲಾಗಿದೆ ವೇಣೂರು ಠಾಣೆಯಲ್ಲಿ
ಕಲಂ: Us 303(2) BNS ಮತ್ತು ಕಲಂ: 42 ̧ 43 ̧ 44 KARNATAKA MINOR MINERAL CONSISTENT RULE 1994 ಮತ್ತು ಕಲಂ: 4(1),4(1A),21(1) (1A) MMRD Act 1957 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version