ಬೆಳ್ತಂಗಡಿ: ಪಡಂಗಡಿ ಗ್ರಾಮ ವ್ಯಾಪ್ತಿಯ ಬದ್ಯಾರ್ ಎಲ್. ಎಮ್. ಪಿಂಟೋ ಆಸ್ಪತ್ರೆ ರಸ್ತೆ, ಕಳೆಂಜಿರೋಡಿ ರಸ್ತೆ ಹಾಗೂ ನೈಕುಳಿ ಮಲ್ಲಿಪಾಡಿ ರಸ್ತೆಗಳ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಜೂ. 7 ರಂದು ರಸ್ತೆಗಳ ಉದ್ಘಾಟನೆ ನೆರವೇರಿಸಿದರು.
ಒಟ್ಟು 1 ಕೋಟಿ 15 ಲಕ್ಷ ರೂ. ಅನುದಾನದಲ್ಲಿ ಈ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆ ಉದ್ಘಾಟನೆಯ ಸಂದರ್ಭದಲ್ಲಿ ಬದ್ಯಾರ್ ಸಂತ ರಫಾಯೆಲ್ ದೇವಾಲಯ ಹಾಗೂ ಎಲ್. ಎಮ್. ಪಿಂಟೋ ಆಸ್ಪತ್ರೆ ವತಿಯಿಂದ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಸಕ ಹರೀಶ್ ಪೂಂಜಾಕಾಮಗಾರಿ ಉದ್ಘಾಟಿಸಿ ಮಾತನಾಡಿ “ಬದ್ಯಾರ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಈ ಭಾಗದ ಸಾರ್ವಜನಿಕರಿಗೆ ಸೂಕ್ತ ರಸ್ತೆ ಸಂಪರ್ಕದ ತೀವ್ರ ಅಗತ್ಯವಿತ್ತು. ಇದನ್ನು ಮನಗಂಡು ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ.
ಕ್ಷೇತ್ರದ ಜನರ ಸಾರ್ವಜನಿಕ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ,” ಎಂದರು.
ಸಂತ ರಫಾಯೆಲ್ ದೇವಾಲಯದ ಧರ್ಮಗುರುಗಳು ಹಾಗೂ ಎಲ್. ಎಮ್. ಪಿಂಟೋ ಆಸ್ಪತ್ರೆಯ ಆಡಳಿತಾಧಿಕಾರಿಯಾದ ವಂದನೀಯ ಫಾದರ್ ರೋಶನ್ ಕ್ರಾಸ್ತಾ ಅವರು ಮಾತನಾಡಿ, “ಸ್ಥಳೀಯರ ಮತ್ತು ರೋಗಿಗಳ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿಗೆ ಬರೋಬ್ಬರಿ 1.15 ಕೋಟಿ ರೂ. ಅನುದಾನ ಒದಗಿಸಿದ ಶಾಸಕರ ಕಾರ್ಯ ಶ್ಲಾಘನೀಯ. ಅವರ ಈ ಜನಪರ ಕಾಳಜಿಗೆ ಸಮಸ್ತ ಊರಿನ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ,” ಎಂದರು.
ಕಾರ್ಯಕ್ರಮದಲ್ಲಿ ಮೀನಾಕ್ಷಿ, ಪಿ. ಎನ್. ವಸಂತಿ, ಶ್ರೀಮತಿ ವನಜಾಕ್ಷಿ, ರಿಚ್ಚರ್ಡ್ ಗೋವಿಯಸ್, ಸಂತೋಷ್ ಕುಮಾರ್ ಜೈನ್, ಬೆಥನಿ ಸಿಸ್ಟರ್ ಸುಪೀರಿಯರ್ ಸಿಸ್ಟರ್ ಜಾನೆಟ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಶಾಂತಿ ಡಿಸೋಜ ಹಾಗೂ ಪಿಡಬ್ಲ್ಯೂಡಿ ಗುತ್ತಿಗೆದಾರರಾದ ರಫೀಕ್ ಉಪಸ್ತಿತರಿದರು.
