Home ಬ್ರೇಕಿಂಗ್‌ ನ್ಯೂಸ್ ಗಡಾಯಿಕಲ್ಲಿನ ಮೇಲೆ ಸಿಲುಕಿಕೊಂಡ ಪ್ರವಾಸಿಗನ ರಕ್ಷಣೆ

ಗಡಾಯಿಕಲ್ಲಿನ ಮೇಲೆ ಸಿಲುಕಿಕೊಂಡ ಪ್ರವಾಸಿಗನ ರಕ್ಷಣೆ

8
0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಚಾರಣತಾಣವಾದ ಗಡಾಯಿಕಲ್ಲಿಗೆ ಹೋದ ಪ್ರವಾಸಿಗನ ಮೊಣಕಾಲಿನಲ್ಲಿ ನೋವು ಉಂಟಾಗಿ ಕೆಳಗಿಳಿಯಲು ಸಾಧ್ಯವಾಗದೆ ಸ್ಥಳೀಯರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರು ಸೇರಿ ಆತನನ್ನು ಹೊತ್ತು ತಂದು ಕೆಳಗಿಳಿಸಿ ರಕ್ಷಿಸಿದ ಘಟನೆ ಜೂನ್ 4 ರಂದು ಗುರುವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತಣ್ಣಿರುಪಂಥ ಗ್ರಾಮದ ಜನಾತಕಲೋನಿ ಪರಿಸರದ ಇಬ್ಬರು ಮಹಿಳೆಯರು ಸಹಿತ ಇಬ್ಬರು ಪುರುಷರು ಟಿಕೆಟ್ ಪಡೆದು ಬೆಳಿಗ್ಗೆ ಗಡಾಯಿಕಲ್ಲಿಗೆ ಹೋಗಿದ್ದರು.
ಗಡಾಯಿಕಲ್ಲಿನ ಮೆಟ್ಟಿಲು ಹತ್ತಿ ಮೇಲೇರಿದ ಬಳಿಕ ಮಹಮ್ಮದ್ ಶರೀಫ್ (30) ಎಂಬಾತ ಕಾಲು ಟ್ವಿಸ್ಟ್ ಆಗಿ ಗಡಾಯಿಕಲ್ಲಿನ ಮೇಲಿಂದ ಆತನಿಗೆ ಕೆಳಗೆ ಇಳಿದು ಬರಲು ಸಾಧ್ಯವಾಗಿಲ್ಲ.

ಈ ಬಗ್ಗೆ 112 ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಬೆಳ್ತಂಗಡಿ ಅಗ್ನಿಶಾಮಕ ದಳದವರಿಗೆ ಪೊಲೀಸರು ಸ್ಥಳಕ್ಕೆ ಬರಲು ಮಾಹಿತಿ ನೀಡಿದ್ದು ತಕ್ಷಣ ಹೆಚ್ಚಿನ ರಕ್ಷಣೆಗಾಗಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೂ ಕರೆ ಮಾಡಿ ಸಹಾಯ ಮಾಡಲು ತಿಳಿಸಿ ಆಗಮಿಸುತ್ತಿದಂತೆ ಸ್ಥಳೀಯರು ಸೇರಿ ಸುಮಾರು 1500 ಮೆಟ್ಟಿಲಿರುವ ಗಡಾಯಿ ಕಲ್ಲಿಗೆ ಹತ್ತಿ ಆತನನ್ನು ಸುಮಾರು 3 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿ ಕೆಳಗೆ ತಂದಿದ್ದಾರೆ. ಬಳಿಕ ಆತನನ್ನು ಬಾಬಾ ಆಂಬುಲೆನ್ಸ್ ಜಲೀಲ್ ಅಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಬೆಳ್ತಂಗಡಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

ಬೆಳ್ತಂಗಡಿ ಅಗ್ನಿಶಾಮಕದಳದ ಫೈರ್ ಸ್ಟೇಷನ್ ಅಧಿಕಾರಿ ವೆಂಕಟೇಶ್ ಎಸ್‌.ಹೆಚ್, ಸಹಾಯಕ ಠಾಣಾಧಿಕಾರಿ ನೀಲಯ್ಯ ಗೌಡ, ಲೋಕೇಶ್ ನಾಯಕ್, ಶ್ರವನ್ ನಾಯಕ್,ವೆಂಕಣ್ಣ,ರಾಮಪ್ಪ,ಚಾಲಕ ರತನ್ ಕುಮಾರ್.ಎನ್, ಶ್ರೀ ಕ್ಷೇತ್ರ ಧರ್ಮಸ್ಥದ ಶೌರ್ಯ ವಿಪತ್ತು ತಂಡದ ಅವಿನಾಶ್ ಭೀಡೆ, ಸಚಿನ್ ಭೀಡೆ, ರಮೇಶ್ ಬೈರಕಟ್ಟ, ಸುಧೀರ್ ಉಜಿರೆ, ರವೀಂದ್ರ ಉಜಿರೆ, ಮಂಜುನಾಥ್ ನಡ, ಬೆಳ್ತಂಗಡಿ ವನ್ಯಜೀವಿ ವಿಭಾಗದ ಡಿ.ಆರ್.ಎಫ್.ಓ ರವೀಂದ್ರ ನಾಯ್ಕ್, ಬೀಟ್ ಫಾರೆಸ್ಟ್ ಹೇಮಂತ್, ಅರಣ್ಯ ವೀಕ್ಷಕ ವೀರಪ್ಪ, ಸುರೇಶ್,ಸ್ಥಳೀಯರಾದ ವಿನೋದ್ ಪಿಂಟೋ, ಸುಜೀತ್ ಶೆಟ್ಟಿ, ಕಿರಣ್ ಮಿರಾಂದ,ಕ್ಲೇವಿನ್ ಮಿರಾಂದದ,ರಿವೋನ್ ಮಿರಾಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here