Home ಅಪರಾಧ ಲೋಕ ಬೆಳ್ತಂಗಡಿ : ಪವನ್ ಕ್ಯಾಂಟಿನ್ ನಲ್ಲಿ ವೇಶ್ಯಾವಟಿಕೆ ಪ್ರಕರಣ; ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ : ಪವನ್ ಕ್ಯಾಂಟಿನ್ ನಲ್ಲಿ ವೇಶ್ಯಾವಟಿಕೆ ಪ್ರಕರಣ; ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

4
0

ಬೆಳ್ತಂಗಡಿ : ಪವನ್ ಕ್ಯಾಂಟಿನ್ ನಲ್ಲಿ ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಓರ್ವ ಸಂತ್ರಸ್ತೆಯನ್ನು ರಕ್ಷಣೆ ಮಾಡಿ ಮೂವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದ ಪ್ರಕರಣ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೆಳ್ತಂಗಡಿ ನಗರದ ಕೆ.ಇ.ಬಿ ರಸ್ತೆಯಲ್ಲಿರುವ ಸುಂದರ್ ಶೆಟ್ಟಿ ಮಾಲೀಕತ್ವದ ಪವನ್ ಕ್ಯಾಂಟಿನ್ ನಲ್ಲಿ ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರು ಮೇ.10 ರಂದು ಸಂಜೆ 5 ಗಂಟೆಗೆ ದಾಳಿ ಮಾಡಿ ದಂಧೆ ನಡೆಸುತ್ತಿದ್ದ ಸುಂದರ್ ಶೆಟ್ಟಿ ಮತ್ತು ಉಸ್ಮಾನ್ ಎಂಬವರನ್ನು ಬಂಧಿಸಿದ್ದರು. ಮತ್ತೊರ್ವ ಗಿರಾಕಿ ಕಲ್ಲೇರಿಯ ಹೈದಾರ್ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯಾಯಾಂಗ ಬಂಧನ:

ವೇಶ್ಯಾವಟಿಕೆ ನಡೆಸುತ್ತಿದ್ದ ಪವನ್ ಕ್ಯಾಂಟಿನ್ ಮಾಲೀಕ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಸುಂದರ್ ಶೆಟ್ಟಿ(55) ಮತ್ತು ಸ್ನೇಹಿತ ನಾವೂರು ಗ್ರಾಮದ ಹುಸ್ಮಾನ್(38) ಎಂಬವರನ್ನು  ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಇಬ್ಬರಿಗೂ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಂತ್ರಸ್ತ ಮಹಿಳೆ ಸಂತ್ವಾನ ಕೇಂದ್ರಕ್ಕೆ:

ವೇಶ್ಯಾವಟಿಕೆ ಪ್ರಕರಣದ ದಾಳಿ ವೇಳೆ ರಕ್ಷಣೆ ಮಾಡಲಾದ 29 ವರ್ಷದ ಮಹಿಳೆಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಮೇ.11 ರಂದು ಹಾಜರುಪಡಿಸಿದ್ದು.ನ್ಯಾಯಾಲಯ ಮಂಗಳೂರಿನ ಮುಡಿಪುನಲ್ಲಿರುವ ಮಹಿಳಾ ಸ್ವಂತಾನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.

ಕ್ಯಾಂಟಿನ್ ನಲ್ಲಿ ಗುಪ್ತ ಕೋಣೆ ಪತ್ತೆ:

ಪವನ್ ಕ್ಯಾಂಟಿನ್ ಒಳಗಡೆ ಅಡುಗೆ ಕೋಣೆಯಲ್ಲಿ ಗುಪ್ತ ಕೋಣೆಯನ್ನು ಸುಂದರ್ ಶೆಟ್ಟಿ ನಿರ್ಮಿಸಿದ್ದಾರೆ. ಪೊಲೀಸ್ ದಾಳಿ ವೇಳೆ ಸಂತ್ರಸ್ತ ಮಹಿಳೆ ಇದೆ ಗುಪ್ತ ಕೋಣೆಯಲ್ಲಿ ಅಡಗಿ ಕುಳಿತಿದ್ದರು ಇದನ್ನು ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ಪತ್ತೆ ಹಚ್ಚಿ ಪ್ರಕರಣ ಬೆಳಕಿಗೆ ತಂದಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here