Home ಅಪಘಾತ ಬೆಳ್ತಂಗಡಿ : ಅಪ್ರಾಪ್ತ ಬಾಲಕ ಸವಾರಿ ಮಾಡುತ್ತಿದ್ದ ಬೈಕ್ ಡಿಕ್ಕಿ; ರಸ್ತೆ ದಾಟುತ್ತಿದ್ದ ಬಾಲಕನಿಗೆ ಗಾಯ

ಬೆಳ್ತಂಗಡಿ : ಅಪ್ರಾಪ್ತ ಬಾಲಕ ಸವಾರಿ ಮಾಡುತ್ತಿದ್ದ ಬೈಕ್ ಡಿಕ್ಕಿ; ರಸ್ತೆ ದಾಟುತ್ತಿದ್ದ ಬಾಲಕನಿಗೆ ಗಾಯ

1
0

ಬೆಳ್ತಂಗಡಿ: ಮಾಲಾಡಿ ಗ್ರಾಮದ ಬರ್ನ ಎಂಬಲ್ಲಿ ಮೋಟಾರ್ ಸೈಕಲ್ ಡಿಕ್ಕಿಯಾಗಿ 14 ವರ್ಷದ ಬಾಲಕ ಗಾಯಗೊಂಡ ಘಟನೆ ಆಗಸ್ಟ್ 15ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮುಂಡಾಡಿ ಮನೆ ನಿವಾಸಿ ಜಗನ್ನಾಥ ಶೆಟ್ಟಿ (40) ರಿಕ್ಷಾ ಚಾಲಕರಾಗಿದ್ದು, ಆಗಸ್ಟ್ 15 ರಂದು ಬೆಳಗ್ಗೆ ಸುಮಾರು 10.30ಕ್ಕೆ ಕ್ಷಿತಿಜ್ (14) ಎಂಬಾತನನ್ನು ಆಟೋರಿಕ್ಷಾದಲ್ಲಿ ಆತನ ಮನೆಗೆ ಬಿಡಲು ಮಾಲಾಡಿ–ಗರ್ಡಾಡಿ ಡಾಮಾರು ರಸ್ತೆಯಲ್ಲಿ ತೆರಳುತ್ತಿದ್ದರು. ಬರ್ನ ತಲುಪಿದಾಗ ಕ್ಷಿತಿಜ್‌ನನ್ನು ರಿಕ್ಷಾದಿಂದ ಇಳಿಸಿ, ಆತ ರಸ್ತೆ ದಾಟುತ್ತಿದ್ದ ವೇಳೆ ಅಪ್ರಾಪ್ತ ಚಾಲಕನೊಬ್ಬ ಸಹಸವಾರನನ್ನು ಕುಳ್ಳಿರಿಸಿಕೊಂಡು ಬಂದ ಮೋಟಾರ್ ಸೈಕಲ್ KA-70-L-0120 ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ಷಿತಿಜ್ ರಸ್ತೆಗೆ ಬಿದ್ದು ಹಣೆಗೆ ಹಾಗೂ ಕಾಲಿಗೆ ರಕ್ತಗಾಯಗಳಾಗಿವೆ.ಗಾಯಾಳುವನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೋಟಾರ್ ಸೈಕಲ್‌ನ್ನು ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ 281, 125(ಎ) ಬಿಎನ್‌ಎಸ್ 2023 ಹಾಗೂ ಕಲಂ 199(ಎ) ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here