ಬೆಳ್ತಂಗಡಿ; ಬಾರಿ ಗಾಳಿ ಮಳೆಗೆ ಬೆಳ್ತಂಗಡಿ ಸಂತೆಕಟ್ಟೆಯ ಆಟೋ ರಿಕ್ಷಾ ನಿಲ್ದಾಣ ಕುಸಿದು ಬಿದ್ದು ರಿಕ್ಷಾಗಳು ಜಂಖಂಗೊಂಡ ಘಟನೆ ಸಂಭವಿಸಿದೆ.
ಶನಿವಾರ ಮಧ್ಯಾಹ್ನ 3.30 ರ ನಂತರ ಏಕಾಏಕಿ ಬಾರಿ ಗಾಳಿ ಬೀಸಿದೆ. ಗಾಳಿಯ ರಭಸಕ್ಕೆ ಸಂತೆಕಟ್ಟೆ ಆಟೋ ರಿಕ್ಷಾ ನಿಲ್ದಾಣ ಸಂಪೂರ್ಣ ಕುಸಿದು ಬಿದ್ದಿದೆ. ನಿಲ್ದಾಣದ ಅಡಿಯಲ್ಲಿ ಈ ಸಂದರ್ಭದಲ್ಲಿ 5-6 ಆಟೋ ರಿಕ್ಷಾಗಳು ಸಿಲುಕಿಕೊಂಡಿದ್ದು ಒಂದು ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಉಳಿದ ಆಟೋಗಳಿಗೆ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. ಚಾಲಕರು ಅಪಾಯದಿಂದ ಪಾರಾಗಿದ್ದಾರೆ.
ಶಾಸಕ ಹರೀಶ್ ಪೂಂಜಾ ರವರ ಪ್ರದೇಶಾಭಿವೃದ್ಧಿ ಯೋಜನೆಯಡಿ ಈ ನಿಲ್ದಾಣ ನಿರ್ಮಿಸಲಾಗಿತ್ತು.








