Home ಸ್ಥಳೀಯ ಸಮಾಚಾರ ಕಾಜೂರಿನಲ್ಲಿ ಪವಿತ್ರ ಈದುಲ್ ಫಿತರ್ ಸಂದೇಶ ನಾಡಿನ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ

ಕಾಜೂರಿನಲ್ಲಿ ಪವಿತ್ರ ಈದುಲ್ ಫಿತರ್ ಸಂದೇಶ ನಾಡಿನ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ

0

ಬೆಳ್ತಂಗಡಿ; ಈ ಪವಿತ್ರ ದಿನವು ಸೌಹಾರ್ದ, ಸಮೃದ್ಧಿ ಮತ್ತು ಶಾಂತಿಯ ಸಂದೇಶವನ್ನು ಪಸರಿಸಲಿ ಎಂಬ ಸಂದೇಶದೊಂದಿಗೆ
ಇತಿಹಾಸ ಪ್ರಸಿದ್ಧ ಕಾಜೂರು ರಹ್ಮಾನಿಯ್ಯ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದ ಆಚರಿಸಲಾಯಿತು.
ವಿಶೇಷ ನಮಾಝ್ ಮತ್ತು ಪ್ರಾರ್ಥನಾ ಕಾರ್ಯಕ್ರಮಕ್ಕೆ ಸಹಾಯಕ ಇಮಾಂ ಅಬ್ದುಲ್ ಅಝೀಝ್ ಸಖಾಫಿ ನೇತೃತ್ವ ನೀಡಿದರು.

ಬಳಿಕ ವಿಶ್ವ ಶಾಂತಿಗಾಗಿ ಕಾಜೂರು ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ ಯು ಇಬ್ರಾಹಿಂ, ಪ್ರದಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದಿಕ್ ಕಾಜೂರು, ಕೋಶಾಧಿಕಾರಿ ಡಿವೈ ಉಮರ್, ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಅಹ್ಸನಿ ಹಾಗೂ ಸಮಿತಿ ಸದಸ್ಯರುಗಳು ಜಮಾತ್ ಹಿರಿಯರು ಉಲಮಾ ಉಮರಾ ನಾಯಕರು ಯುವಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version