ಬೆಳ್ತಂಗಡಿ: ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಮಾ 15 ರಂದು ರೂ.10.00 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಕುಡದಬೆಟ್ಟು ಸಂತ ಜಾನ್ ಪೌಲ್ ಚರ್ಚ್ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಸೆಬಾಸ್ಟಿಯನ್, ಸಂತ ಜಾನ್ ಪೌಲ್ ಚರ್ಚ್ ನ ಫಾದರ್ ಸನ್ನಿ ಅಲಾಪಟ್, ಟ್ರಸ್ಟಿಗಳಾದ ಅಲ್ವಿನ್, ಜಾರ್ಜ್, ದಿನು ಹಾಗೂ ಪ್ರಮುಖರು, ನಾಗರಿಕರು ಉಪಸ್ಥಿತರಿದ್ದರು.









