ಬೆಳ್ತಂಗಡಿ; ಮಂಗಳೂರು-ವಿಲ್ಲು ಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಬಡಿದು ಕಂಬ ತುಂಡಾಗಿ, ಕಾರು ಮಗುಚಿ ಬಿದ್ದ ಘಟನೆ ನಡೆದಿದೆ.
ತಿಪಟೂರಿನಿಂದ ಉಜಿರೆ ಕಡೆ ಸಂಚರಿಸುತ್ತಿದ್ದ ಕಾರು ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ರಸ್ತೆಯ ತೀರಾ ಬಲಬದಿಗೆ ಚಲಿಸಿ ವಿದ್ಯುತ್ ಕಂಬಕ್ಕೆ ಬಡಿದು ವಿದ್ಯುತ್ ಕಂಬ ತುಂಡಾದ ಕಾರಣ ಕಕ್ಕಿಂಜೆ ವಿದ್ಯುತ್ ಸಬ್ ಸ್ಟೇಷನ್ ನ ಮುಂಡಾಜೆ ಹಾಗೂ ದಿಡುಪೆ ಫೀಡರ್ ನ ಸಾವಿರಾರು ಗ್ರಾಹಕರಿಗೆ ಮಧ್ಯಾಹ್ನ 2 ಗಂಟೆ ತನಕವು ವಿದ್ಯುತ್ ವ್ಯತ್ಯಯ ಉಂಟಾಯಿತು.
ಘಟನೆಯಲ್ಲಿ ಕಾರು ಮಗುಚಿ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಿಪಟೂರು ಮೂಲದ ಶ್ರೀನಿವಾಸ (53) ಹಾಗೂ ಷಣ್ಮುಖ (46) ಎಂಬವರು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
