


ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಲಯದ CC No. 657/2017 ಠಾಣಾ ಅಕ್ರ 91/2017 ಕಲಂ. 380 ಐ ಪಿ ಸಿ ಪ್ರಕರಣದಲ್ಲಿ ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬೆಂಗಳೂರು ಕುಂಬಳಗೋಡು,ಗೇರುಪಾಳ್ಯ ನಿವಾಸಿ ಗಂಗಾಧರಪ್ಪ ಪುತ್ರ ವೆಂಕಟೇಶ್ @ ಡಾಬರ್ ವೆಂಕಟೇಶ್(38) ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಉಪ ಅಧಿಕ್ಷಕರು ರೋಹಿಣಿ.ಸಿ.ಕೆ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಉಪನೀರಿಕ್ಷಕರು ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿ ವ್ರಷಭ, ಚರಣ್ ರಾಜ್ ರವರು ತುಮಕೂರು ಜಿಲ್ಲೆಯ ತಿಪಟೂರ್ ಎಂಬಲ್ಲಿಂದ ಮಾ.4 ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಮಾ.5 ರಂದು ಹಾಜರುಪಡಿಸಲಾಗಿದ್ದು. ಬಳಿಕ ಸೂಕ್ತ ಜಾಮೀನಿನಲ್ಲಿ ಬಿಡುಗಡೆ ಮಾಡಿದ ನ್ಯಾಯಾಲಯ.







